• English
    • ಲಾಗಿನ್/ರಿಜಿಸ್ಟರ್

    Tata Punch Facelift ಅಭಿವೃದ್ಧಿಯಲ್ಲಿದೆ, ಈ ಪರೀಕ್ಷಾ ಆವೃತ್ತಿ ಇದೇ ಮೊದಲ ಬಾರಿಗೆ ಕಂಡುಬಂದಿರಬಹುದು

    ಟಾಟಾ ಪಂಚ್ ಫೇಸ್‌ಲಿಫ್ಟ್ 2025 ರಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ

    shreyash
    shreyash
    published on ಮಾರ್ಚ್‌ 19, 2024 17:45 ist
    info icon
    published onMar 19, 2024 17:45 IST
    last updated onMar 19, 2024 17:45 IST
    126 Views
    • ಕಾಮೆಂಟ್‌ ಅನ್ನು ಬರೆಯಿರಿ

    Tata Punch facelift

    • ಟಾಟಾ ಪಂಚ್ ಫೇಸ್‌ಲಿಫ್ಟ್ ಇತ್ತೀಚೆಗೆ ಬಿಡುಗಡೆಯಾದ ಪಂಚ್ ಇವಿಯಂತೆಯೇ ಅದೇ ಆಪ್‌ಡೇಟ್‌ಗಳನ್ನು ಸಂಯೋಜಿಸುತ್ತದೆ.
    • ಹೊರಭಾಗದ ಆಪ್‌ಗ್ರೇಡ್‌ಗಳು ನವೀಕರಿಸಿದ ಗ್ರಿಲ್ ಮತ್ತು ಎಲ್ಇಡಿ ಡಿಆರ್‌ಎಲ್‌ಗಳು, ಮರುವಿನ್ಯಾಸಗೊಳಿಸಲಾದ ಹೆಡ್‌ಲೈಟ್‌ ಹೌಸಿಂಗ್ ಮತ್ತು ನವೀಕರಿಸಿದ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳನ್ನು ಒಳಗೊಂಡಿರುತ್ತದೆ.
    • ಇದು ದೊಡ್ಡ 10.25-ಇಂಚಿನ ಟಚ್‌ಸ್ಕ್ರೀನ್ ಮತ್ತು ದೊಡ್ಡ 10.25-ಇಂಚಿನ ಡಿಜಿಟಲ್ ಡ್ರೈವರ್‌ಗಳ ಡಿಸ್‌ಪ್ಲೇಗಳನ್ನು  ಪಡೆಯಬಹುದು.
    • ಸುರಕ್ಷತೆಯ ದೃಷ್ಟಿಯಿಂದ, ಇದು ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಅನ್ನು ಪಡೆಯುವ ಸಾಧ್ಯತೆಯಿದೆ.

    ಟಾಟಾ ಪಂಚ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ 2021 ರಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಯಿತು ಮತ್ತು 2024 ರಲ್ಲಿ, ಇದು ನವೀಕರಿಸಿದ ಲುಕ್‌ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ಆಲ್-ಎಲೆಕ್ಟ್ರಿಕ್ ಆವೃತ್ತಿಯನ್ನು ಸಹ ಬಿಡುಗಡೆ ಮಾಡಿದೆ. ಆದಾಗ್ಯೂ, ಪಂಚ್‌ನ ICE (ಇಂಟರ್ನಲ್ ಕಂಬಸ್ಟಿನ್‌ ಎಂಜಿನ್‌) ಆವೃತ್ತಿಯು ಮಿಡ್‌ಲೈಫ್ ನವೀಕರಣಕ್ಕಾಗಿ ಇನ್ನೂ ಬಾಕಿಯಿದೆ, ಇದು 2025 ರಲ್ಲಿ ಆಗಮಿಸುವ ನಿರೀಕ್ಷೆಯಿದೆ. ಪಂಚ್‌ನ ಆವೃತ್ತಿಯನ್ನು ಕವರ್‌ನ ಮಾಡಿರುವ ಲುಕ್‌ನಲ್ಲಿ ರಹಸ್ಯವಾಗಿ ಸೆರೆ ಹಿಡಿಯಲಾಗಿದೆ ಮತ್ತು ಇದು ಹೆಚ್ಚಾಗಿ ಫೇಸ್‌ಲಿಫ್ಟೆಡ್ ಆವೃತ್ತಿಯಾಗಿದೆ, ಮೊದಲ ಬಾರಿಗೆ ಗುರುತಿಸಲಾಗಿದೆ.

    ಸ್ಪೈ ಶಾಟ್‌ಗಳಲ್ಲಿ ನಾವು ಏನು ನೋಡಿದ್ದೇವೆ?

     ಸಂಪೂರ್ಣವಾಗಿ ಮರೆಮಾಚಲ್ಪಟ್ಟಿದ್ದರೂ ಸಹ, ಪಂಚ್ EV-ಪ್ರೇರಿತ ನವೀಕರಿಸಿದ ಫೆಸಿಯಾವು ಪರೀಕ್ಷಾ ಆವೃತ್ತಿಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಪಂಚ್ ಫೇಸ್‌ಲಿಫ್ಟ್ ಹೊಸ ಗ್ರಿಲ್, ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಮರುವಿನ್ಯಾಸಗೊಳಿಸಲಾದ ಹೆಡ್‌ಲೈಟ್ ಹೌಸಿಂಗ್ ಅನ್ನು ಸ್ವೀಕರಿಸುವ ನಿರೀಕ್ಷೆಯಿದೆ, ಇದು ಟಾಟಾ ಪಂಚ್‌ನ ಆಲ್-ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಕಂಡುಬರುವಂತೆಯೇ ಇದೆ.

    Tata Punch facelift rear

    ಆದಾಗಿಯೂ, ಮೈಕ್ರೋ ಎಸ್‌ಯುವಿಯ ಒಟ್ಟಾರೆ ಪ್ರೊಫೈಲ್‌ಗೆ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ, ಆದರೂ ಇದು ನವೀಕರಿಸಿದ ಅಲಾಯ್‌ ವೀಲ್‌ಗಳನ್ನು ಪಡೆಯಬಹುದು. ಹಿಂಭಾಗದಲ್ಲಿ, ಅದರ ಟೈಲ್‌ಲೈಟ್‌ಗಳು ಪಂಚ್‌ನ ಅಸ್ತಿತ್ವದಲ್ಲಿರುವ ಆವೃತ್ತಿಯನ್ನು ಹೋಲುತ್ತವೆ, ಆದರೆ ಹಿಂಭಾಗದ ಬಂಪರ್‌ಗೆ ಸಣ್ಣ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ.

    ಇದನ್ನು ಸಹ ಓದಿ: Tata Nexon EV Facelift Long Range ವರ್ಸಸ್ Tata Nexon EV (ಹಳೆಯ ವರ್ಷನ್): ಪರ್ಫಾರ್ಮೆನ್ಸ್ ಹೋಲಿಕೆ ಇಲ್ಲಿದೆ 

    ಕ್ಯಾಬಿನ್ ನವೀಕರಣಗಳು

    Tata Punch EV Interior

    ಪಂಚ್ ಫೇಸ್‌ಲಿಫ್ಟ್‌ನ ಒಳಭಾಗವು ಹೇಗೆ ಕಾಣುತ್ತದೆ ಎಂಬುದರ ಕುರಿತು ನಮಗೆ ಸ್ಪಷ್ಟವಾದ ಇಣುಕು ನೋಟ ಸಿಗದಿದ್ದರೂ, ಇದು ಪಂಚ್ EV ಯ ರೀತಿಯಲ್ಲಿ ನವೀಕರಣಗಳನ್ನು ಪಡೆಯುವ ಸಾಧ್ಯತೆಯಿದೆ. ಪಂಚ್‌ನ ಫೇಸ್‌ಲಿಫ್ಟೆಡ್ ಆವೃತ್ತಿಯು ದೊಡ್ಡ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ ಮತ್ತು ವೆಂಟಿಲೇಟೆಡ್‌ ಫ್ರಂಟ್‌ ಸೀಟ್‌ಗಳಂತಹ ಹೆಚ್ಚಿನ ಸೌಕರ್ಯಗಳನ್ನು ಒಳಗೊಂಡಿರುತ್ತದೆ. ಸನ್‌ರೂಫ್ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ಸೌಕರ್ಯಗಳನ್ನು ಇದರಲ್ಲಿಯೂ ನೀಡಲಾಗುವುದು. 

    ಟಾಟಾ ಪಂಚ್ ಫೇಸ್‌ಲಿಫ್ಟ್‌ನ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾದಿಂದ ಮತ್ತಷ್ಟು ವರ್ಧಿಸುತ್ತದೆ. ಪ್ರಸ್ತುತ, ಪಂಚ್ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ಮಾತ್ರ ಬರುತ್ತದೆ.

    ಇದನ್ನು ಸಹ ಓದಿ: Tata Punch EV ಎಂಪವರ್ಡ್ ಪ್ಲಸ್ ಎಸ್ ಲಾಂಗ್ ರೇಂಜ್ Vs Mahindra XUV400 ಇಸಿ ಪ್ರೊ: ಯಾವ ಇವಿ ಖರೀದಿಸಬೇಕು? 

    ಪವರ್‌ಟ್ರೇನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ನಿರೀಕ್ಷಿಸಲಾಗಿಲ್ಲ

    Tata Punch Engine

    ಟಾಟಾ ಪಂಚ್ ಫೇಸ್‌ಲಿಫ್ಟ್ ಅಸ್ತಿತ್ವದಲ್ಲಿರುವ ಪಂಚ್‌ನೊಂದಿಗೆ ನೀಡಲಾದ ಅದೇ 1.2-ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ (88 PS ಮತ್ತು 115 Nm) ಅನ್ನು ಬಳಸುವುದನ್ನು ಮುಂದುವರಿಸುತ್ತದೆ. ಈ ಎಂಜಿನ್‌ 5-ಸ್ಪೀಡ್‌ ಮ್ಯಾನುಯಲ್‌ ಅಥವಾ 5-ಸ್ಪೀಡ್‌ AMT (ಆಟೋಮ್ಯಾಟಿಕ್‌) ಟ್ರಾನ್ಸ್‌ಮಿಷನ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ.

    ಅದೇ ಎಂಜಿನ್ ಅನ್ನು ಸಿಎನ್‌ಜಿಯಲ್ಲಿಯೂ ನೀಡಲಾಗುತ್ತದೆ, ಆದರೆ 73.5 ಪಿಎಸ್ ಮತ್ತು 103 ಎನ್‌ಎಂ ಕಡಿಮೆ ಉತ್ಪಾದನೆಯೊಂದಿಗೆ (ಸಿಎನ್‌ಜಿ ಮೋಡ್‌ನಲ್ಲಿ), ಕೇವಲ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಆದಾಗಿಯೂ, ಇತ್ತೀಚೆಗೆ ಟಾಟಾ ಟಿಯಾಗೊ ಸಿಎನ್‌ಜಿ ಮತ್ತು ಟಾಟಾ ಟಿಗೊರ್ ಸಿಎನ್‌ಜಿಯೊಂದಿಗೆ ಪರಿಚಯಿಸಿದಂತೆ ಟಾಟಾ ಪಂಚ್ ಸಿಎನ್‌ಜಿ ಫೇಸ್‌ಲಿಫ್ಟ್ ಅನ್ನು 5-ಸ್ಪೀಡ್ ಎಎಮ್‌ಟಿ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಒದಗಿಸಬಹುದು. ಪಂಚ್ ಸಿಎನ್‌ಜಿ ಟಾಟಾದ ಡ್ಯುಯಲ್-ಸಿಲಿಂಡರ್ ತಂತ್ರಜ್ಞಾನವನ್ನು ಸಹ ಹೊಂದಿದೆ, ಇದು ಬಳಸಬಹುದಾದ ಬೂಟ್ ಸ್ಪೇಸ್ ಅನ್ನು ನೀಡುತ್ತದೆ. 

    ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

    ಟಾಟಾ ಪಂಚ್ ಫೇಸ್‌ಲಿಫ್ಟ್‌ನ ಎಕ್ಸ್ ಶೋರೂಂ ಬೆಲೆಯು 6 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ. ಇದು ಮಾರುಕಟ್ಟೆಯಲ್ಲಿ ಹ್ಯುಂಡೈ ಎಕ್ಸ್‌ಟರ್‌ನೊಂದಿಗೆ ನೇರ ಸ್ಪರ್ಧೆಯನ್ನು ಒಡ್ಡುತ್ತಾ, ಮಾರುತಿ ಫ್ರಾಂಕ್ಸ್, ಸಿಟ್ರೊಯೆನ್ C3, ಮಾರುತಿ ಇಗ್ನಿಸ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕೈಗರ್‌ಗಳಿಗೆ ಪರ್ಯಾಯವಾಗಿ ತನ್ನ ಪೈಪೋಟಿಯನ್ನು ಮುಂದುವರಿಸುತ್ತದೆ.

    ಇದರ ಬಗ್ಗೆ ಹೆಚ್ಚು ಓದಿ: ಪಂಚ್ AMT

    was this article helpful ?

    shreyash
    A car enthusiast who enjoys driving and talking about cars 24/7, and not just because he has a background in automobile engineering and is fascinated by the mechanisms that turn wheels. He adores European automobiles, his personal favourite being the C8-gen Audi RS7, closely followed by the Skoda Superb. Besides cars, he also enjoys exploring new places.ಮತ್ತಷ್ಟು ಓದು

    Write your Comment on Tata ಪಂಚ್‌

    Similar cars to compare & consider

    ಕಾರು ಸುದ್ದಿ

    • ಇತ್ತಿಚ್ಚಿನ ಸುದ್ದಿ

    ಟ್ರೆಂಡಿಂಗ್ ಎಸ್‌ಯುವಿ ಕಾರುಗಳು

    • ಉಪಕಮಿಂಗ್
    • ಪಾಪ್ಯುಲರ್
    *ex-showroom <cityname> ನಲ್ಲಿ ಬೆಲೆ
    ×
    we need your ನಗರ ಗೆ customize your experience