ಡೀಲರ್ಶಿಪ್ಗಳಿಗೆ ಆಗಮಿಸಿದ ಹೊಸ Hyundai Creta Electric, ಸದ್ಯದಲ್ಲೇ ಟೆಸ್ಟ್ ಡ್ರೈವ್ಗೂ ಲಭ್ಯ..
ಕೊರಿಯಾದ ಈ ಕಾರು ತಯಾರಕರ ಭಾರತದ ಕಾರುಗಳಲ್ಲಿ ಕ್ರೆಟಾ ಎಲೆಕ್ಟ್ರಿಕ್ ಅತ್ಯಂತ ಕೈಗೆಟುಕುವ ಇವಿಯಾಗಿದೆ
- ಕಾಮೆಂಟ್ ಅನ್ನು ಬರೆಯಿರಿ

ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋ 2025ರಲ್ಲಿ ಇತ್ತೀಚೆಗೆ ಬಿಡುಗಡೆಯಾದ ನಂತರ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕೆಲವು ಪ್ಯಾನ್-ಇಂಡಿಯಾ ಡೀಲರ್ಶಿಪ್ಗಳನ್ನು ತಲುಪಿದೆ. ಇದು ಎಕ್ಸಿಕ್ಯುಟಿವ್, ಸ್ಮಾರ್ಟ್, ಪ್ರೀಮಿಯಂ ಮತ್ತು ಎಕ್ಸಲೆನ್ಸ್ ಎಂಬ ನಾಲ್ಕು ವಿಶಾಲವಾದ ವೇರಿಯೆಂಟ್ಗಳಲ್ಲಿ ಲಭ್ಯವಿದೆ. ಇದರ ಬೆಲೆಗಳು 17.99 ಲಕ್ಷ ರೂ.ನಿಂದ 23.50 ಲಕ್ಷ ರೂ.ವರೆಗೆ (ಪರಿಚಯಾತ್ಮಕ ಎಕ್ಸ್-ಶೋರೂಂ, ಪ್ಯಾನ್-ಇಂಡಿಯಾ) ಇದೆ.
ಕೊರಿಯಾ ಮೂಲದ ಕಾರು ತಯಾರಕ ಕಂಪನಿಯು ಕ್ರೆಟಾ ಎಲೆಕ್ಟ್ರಿಕ್ ಬುಕಿಂಗ್ಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ, ಆದರೆ ಟೆಸ್ಟ್ ಡ್ರೈವ್ಗಳು ಮತ್ತು ಡೆಲಿವೆರಿಗಳನ್ನು ಪ್ರಾರಂಭಿಸುವ ದಿನಾಂಕಗಳನ್ನು ಇನ್ನೂ ಖಚಿತಪಡಿಸಿಲ್ಲ. ಇದು ಡೀಲರ್ಶಿಪ್ಗಳಿಗೆ ಬರಲು ಪ್ರಾರಂಭಿಸಿರುವುದರಿಂದ, ಟೆಸ್ಟ್ ಡ್ರೈವ್ಗಳು ಶೀಘ್ರದಲ್ಲೇ ಪ್ರಾರಂಭವಾಗಬೇಕು ಎಂದು ನಾವು ಅಂದಾಜಿಸುತ್ತೇವೆ.
ಹಾಗೆಯೇ, ನಮ್ಮ ಡೀಲರ್ಶಿಪ್ ಮೂಲಗಳಿಂದ ನಾವು ಕ್ರೆಟಾದ ಎಲೆಕ್ಟ್ರಿಕ್ ಆವೃತ್ತಿಯ ಕೆಲವು ಚಿತ್ರಗಳನ್ನು ಪಡೆದುಕೊಂಡಿದ್ದೇವೆ ಮತ್ತು ಪ್ರದರ್ಶಿತ ಮೊಡೆಲ್ನಲ್ಲಿ ನಾವು ನೋಡಬಹುದಾದದ್ದು ಇಲ್ಲಿದೆ.
ಹೊಸತನದಿಂದ ಕೂಡಿರುವ ಎಸ್ಯುವಿ


ಪ್ರದರ್ಶಿಸಲಾದ ಕ್ರೆಟಾ ಎಲೆಕ್ಟ್ರಿಕ್ ಓಷನ್ ಬ್ಲೂ ಬಣ್ಣದಲ್ಲಿ ಅಬಿಸ್ ಬ್ಲ್ಯಾಕ್ ರೂಫ್ನೊಂದಿಗೆ ಬರುತ್ತದೆ. ನಾವು 17-ಇಂಚಿನ ಏರೋಡೈನಾಮಿಕ್ ಆಗಿ ವಿನ್ಯಾಸಗೊಳಿಸಲಾದ ಅಲಾಯ್ ವೀಲ್ಗಳು, ಸುತ್ತಲೂ LED ಲೈಟ್ಗಳು ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳಿಗಾಗಿ (ADAS) ರಾಡಾರ್ ಹೌಸಿಂಗ್ಗಳನ್ನು ಸಹ ಗುರುತಿಸಬಹುದು. ಚಿತ್ರದಲ್ಲಿ ತೋರಿಸಿರುವ ಕಾರಿನಲ್ಲಿ ಸಕ್ರಿಯ ಏರ್ ಫ್ಲಾಪ್ಗಳು, ಬೆಳ್ಳಿ ಸ್ಕಿಡ್ ಪ್ಲೇಟ್ಗಳು ಮತ್ತು ಕಪ್ಪು ರೂಫ್ ರೇಲ್ಗಳನ್ನು ಸಹ ಕಾಣಬಹುದು.


ಒಳಭಾಗದಲ್ಲಿ, ಡ್ಯುಯಲ್-ಸ್ಕ್ರೀನ್ ಸೆಟಪ್, ಆಟೋ ಎಸಿ ಕಂಟ್ರೋಲ್ ಪ್ಯಾನಲ್, ಪನೋರಮಿಕ್ ಸನ್ರೂಫ್ ಮತ್ತು ಚಾಲಕನ ಸೀಟಿನಲ್ಲಿ ಮೆಮೊರಿ ಫಂಕ್ಷನ್ಗಾಗಿ ಬಟನ್ಗಳನ್ನು ಕಾಣಬಹುದು. ಮುಂಭಾಗದ ಸೀಟುಗಳ ಹಿಂದೆ ಟ್ರೇಗಳು ಹಾಗು ಹಿಂಭಾಗದ ಸೀಟ್ನ ಮಧ್ಯದ ಆರ್ಮ್ರೆಸ್ಟ್ನಲ್ಲಿ ಕಪ್ಹೋಲ್ಡರ್ಗಳನ್ನು ಹೊಂದಿವೆ.
ಈ ಎಲ್ಲಾ ಸೌಲಭ್ಯಗಳನ್ನು ಗಮನಿಸುವಾಗ ಪ್ರದರ್ಶನದಲ್ಲಿರುವ ಕ್ರೆಟಾ ಎಲೆಕ್ಟ್ರಿಕ್ ಅತ್ಯುತ್ತಮ ಬ್ಯಾಟರಿ ಪ್ಯಾಕ್ನೊಂದಿಗೆ ಬರುವ ಟಾಪ್ ಮೊಡೆಲ್ ಆಗಿರುವ ಎಕ್ಸಲೆನ್ಸ್ ವೇರಿಯೆಂಟ್ ಆಗಿರಬಹುದು ಎಂದು ನಮಗೆ ತಿಳಿಯುತ್ತದೆ.
ಕ್ರೆಟಾ ಎಲೆಕ್ಟ್ರಿಕ್ ನ ಬ್ಯಾಟರಿ ಪ್ಯಾಕ್ ಆಯ್ಕೆಗಳು ಮತ್ತು ವಿಶೇಷಣ ಆಯ್ಕೆಗಳನ್ನು ನೋಡೋಣ.
ಇದನ್ನೂ ಓದಿ: ಆಟೋ ಎಕ್ಸ್ಪೋ 2025ರಲ್ಲಿ ಮಾರುತಿಯ ಮೊದಲ ಇವಿಯಾದ e Vitara ಅನಾವರಣ
ಕ್ರೆಟಾ ಎಲೆಕ್ಟ್ರಿಕ್: ಪವರ್ಟ್ರೇನ್ ಆಯ್ಕೆಗಳು

| ಬ್ಯಾಟರಿ ಪ್ಯಾಕ್ |
42 ಕಿ.ವ್ಯಾಟ್ |
51.4 ಕಿ.ವ್ಯಾಟ್ |
| ಎಲೆಕ್ಟ್ರಿಕ್ ಮೋಟಾರುಗಳ ಸಂಖ್ಯೆ |
1 |
1 |
| ಪವರ್ |
135 ಪಿಎಸ್ |
171 ಪಿಎಸ್ |
| ಟಾರ್ಕ್ |
200 ಎನ್ಎಮ್ |
200 ಎನ್ಎಮ್ |
| ಕ್ಲೈಮ್ ಮಾಡಲಾದ ರೇಂಜ್ (MIDC ಭಾಗ 1+2) |
390 ಕಿ.ಮೀ. |
473 ಕಿ.ಮೀ. |
11 ಕಿ.ವ್ಯಾಟ್ ಎಸಿ ಚಾರ್ಜರ್ ಚಿಕ್ಕ ಬ್ಯಾಟರಿ ಪ್ಯಾಕ್ ಅನ್ನು 4 ಗಂಟೆಗಳಲ್ಲಿ 10-100 ಪ್ರತಿಶತದಷ್ಟು ಚಾರ್ಜ್ ಮಾಡಬಹುದು, ಆದರೆ ದೊಡ್ಡ ಯೂನಿಟ್ಗೆ ಇದೇ ರೀತಿಯ ಚಾರ್ಜ್ 4 ಗಂಟೆ 50 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಮತ್ತೊಂದೆಡೆ, 50 ಕಿ.ವ್ಯಾಟ್ ಡಿಸಿ ಫಾಸ್ಟ್ ಚಾರ್ಜರ್ ಇವಿಯ ಎರಡೂ ಬ್ಯಾಟರಿ ಪ್ಯಾಕ್ಗಳನ್ನು 58 ನಿಮಿಷಗಳಲ್ಲಿ 10-80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು.
ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್: ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿನ ಬೆಲೆ 17.99 ಲಕ್ಷ ರೂ.ಗಳಿಂದ 23.50 ಲಕ್ಷ ರೂ.ಗಳವರೆಗೆ (ಪರಿಚಯಾತ್ಮಕ ಎಕ್ಸ್ ಶೋ ರೂಂ, ಭಾರತಾದ್ಯಂತ) ಇದೆ. ಆದರೆ, ಈ ಬೆಲೆಗಳು 11 ಕಿ.ವ್ಯಾಟ್ ಎಸಿ ಚಾರ್ಜರ್ಗೆ ಪ್ರತ್ಯೇಕವಾಗಿವೆ, ಇದನ್ನು ಪ್ರತ್ಯೇಕವಾಗಿ 73,000 ರೂ.ಗಳಿಗೆ ಖರೀದಿಸಬೇಕಾಗುತ್ತದೆ. ಪ್ರತಿಸ್ಪರ್ಧಿಗಳ ವಿಷಯದಲ್ಲಿ, ಕ್ರೆಟಾ ಎಲೆಕ್ಟ್ರಿಕ್ ಟಾಟಾ ಕರ್ವ್ ಇವಿ, ಮಹೀಂದ್ರಾ ಬಿಇ 6, ಎಂಜಿ ಝಡ್ಎಸ್ ಇವಿ ಮತ್ತು ಮುಂಬರುವ ಮಾರುತಿ ಇ ವಿಟಾರಾಗಳೊಂದಿಗೆ ಪೈಪೋಟಿ ನಡೆಸುತ್ತದೆ.
ಕಾರುಗಳ ಲೋಕದ ನಿರಂತರ ಆಪ್ಡೇಟ್ಗಳನ್ನು ಪಡೆಯಲು ಕಾರ್ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ














