ಟೊಯೋಟಾ ಟೈಸರ್
ಟೊಯೋಟಾ ಟೈಸರ್ ಬೆಲೆ/ದಾರ & ರೂಪಾಂತರಗಳು
Taisor ಗೆ 12 ವೇರಿಯಂಟ್ಸ್ ಇವೆ, ₹7.43L ನಿಂದ ಸ್ಟಾರ್ಟ್ ಆಗುತ್ತೆ, 1.2L K-series petrol (66 kW) ಮತ್ತು 1.0L K-series Turbo (73.6 kW) ಎಂಜಿನ್ಗಳಲ್ಲಿ ಸಿಗುತ್ತೆ. ಇದು Toyota ದ rebadged compact crossover (Maruti Fronx ಗೆ ಸಿಸ್ಟರ್). E CNG (₹7.43L) ಬೇಸಿಕ್ ವೇರಿಯಂಟ್, 6 airbags, ABS ಮತ್ತು hill hold ಇದೆ. S Plus (₹8.68L ನಿಂದ) 22.86cm 9-inch ಟಚ್ಸ್ಕ್ರೀನ್ (wireless Android Auto + CarPlay), ARKAMYS audio, automatic climate, push start ಮತ್ತು steering audio controls ಸೇರಿಸುತ್ತೆ. G Turbo MT (₹10.45L ನಿಂದ) 1.0L Turbo ಕೊಡುತ್ತೆ (1.2L NA ಗಿಂತ ಝಿಪ್-ಝಾಪ್ ಪರ್ಫಾರ್ಮೆನ್ಸ್), LED multi-reflector headlamps, 16-inch ಅಲಾಯ್ ವೀಲ್ಸ್, leatherette steering ಮತ್ತು connected car ಫೀಚರ್ಸ್ ಸಿಗುತ್ತೆ. V Turbo (₹11.36L ನಿಂದ) head-up display, 360° ಕ್ಯಾಮೆರಾ, wireless charger, auto-fold ಇರೋ electric ORVMs, full LED tail lamps ಮತ್ತು 60+ ಫೀಚರ್ಸ್ ಇರೋ Toyota i-Connect ಜೊತೆ ಟಾಪ್ ಆಗುತ್ತೆ. ಹೆಚ್ಚಿನ ಬಯರ್ಸ್ G Turbo MT (₹10.45L) ಗೆ ಸೆಟಲ್ ಆಗ್ತಾರೆ, 1.0L Turbo, 9-inch wireless CarPlay ಟಚ್ಸ್ಕ್ರೀನ್, automatic climate, push start, 16-inch ಅಲಾಯ್ ವೀಲ್ಸ್ ಮತ್ತು 6 airbags ಸಿಗುತ್ತೆ, V Turbo AT ಯ HUD, 360° ಕ್ಯಾಮೆರಾ, wireless charger ಮತ್ತು AT auto ಗೆ ~₹2.33L ಎಕ್ಸ್ಟ್ರಾ ಕೊಡದೆ.
ಟೊಯೋಟಾ ಟೈಸರ್ ಸ್ಪೇಷಿಫಿಕೇಶನ್ ಮತ್ತು ಫೆಅತುರ್ಸ್
| ಇಂಜಿನ್ | 998 ಸಿಸಿ - 1197 ಸಿಸಿ |
| ಪವರ್ | 76.43 - 98.69 ಬಿಹೆಚ್ ಪಿ |
| ಟಾರ್ಕ್ | 98.5 ಎನ್ಎಮ್ - 147.6 ಎನ್ಎಮ್ |
| ಆಸನ ಸಾಮರ್ಥ್ಯ | 5 |
| ಡ್ರೈವ್ ಟೈಪ್ | ಫ್ರಂಟ್ ವೀಲ್ |
| ಮೈಲೇಜ್ | 20 ಗೆ 22.8 ಕೆಎಂಪಿಎಲ್ |
ಟೈಸರ್ 2026: ಲೇಟೆಸ್ಟ್ updates
ಟೊಯೊಟಾ ಟೈಸರ್ ಕುರಿತ ಇತ್ತೀಚಿನ ಅಪ್ಡೇಟ್ ಏನು?
ಟೊಯೊಟಾ ಟೈಸರ್ ಅನ್ನು ದಕ್ಷಿಣ ಆಫ್ರಿಕಾದಲ್ಲಿ ಟೊಯೊಟಾ ಸ್ಟಾರ್ಲೆಟ್ ಕ್ರಾಸ್ ಎಂಬ ಹೆಸರಿನಲ್ಲಿ ದೊಡ್ಡ ಪೆಟ್ರೋಲ್ ಎಂಜಿನ್ನೊಂದಿಗೆ ಬಿಡುಗಡೆ ಮಾಡಲಾಗಿದೆ.
ಟೊಯೊಟಾ ಟೈಸರ್ನ ಬೆಲೆ ಎಷ್ಟು?
ಟೊಯೊಟಾ ಟೈಸರ್ನ ಎಕ್ಸ್ ಶೋರೂಮ್ ಬೆಲೆ 7.74 ಲಕ್ಷ ರೂ.ನಿಂದ 13.04 ಲಕ್ಷ ರೂ.ವರೆಗೆ ಇದೆ. ಇದು ಮಾರುತಿ ಫ್ರಾಂಕ್ಸ್ಗಿಂತ ಸ್ವಲ್ಪ ಹೆಚ್ಚು ದುಬಾರಿಯಾಗಿದೆ, ವಿಶೇಷವಾಗಿ ಇದರ ಮಿಡಲ್ ವೇರಿಯೆಂಟ್ಗಳಲ್ಲಿ. ಆದರೆ, ಟಾಪ್-ಸ್ಪೆಕ್ ವೇರಿಯೆಂಟ್ಗಳು ಒಂದೇ ಬೆಲೆಯನ್ನು ಹೊಂದಿವೆ.
ಟೊಯೊಟಾ ಟೈಸರ್ನಲ್ಲಿ ಎಷ್ಟು ವೇರಿಯೆಂಟ್ಗಳಿವೆ ?
ಟೊಯೋಟಾ ಟೈಸರ್ E, S, S+, G, ಮತ್ತು V ಎಂಬ ಐದು ವೇರಿಯೆಂಟ್ಗಳಲ್ಲಿ ಬರುತ್ತದೆ.
ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ಒದಗಿಸುವ ಆವೃತ್ತಿ ಯಾವುದು ?
ಕಡಿಮೆ ಬಜೆಟ್ನಲ್ಲಿ ಉತ್ತಮ ಕಾರನ್ನು ಹುಡುಕುವವರಿಗೆ ಇದರ ಬೇಸ್ ಇ ವೇರಿಯೆಂಟ್ ಉತ್ತಮ ಆಯ್ಕೆಯಾಗಿದೆ. ಇದು ಅನೇಕ ಅಗತ್ಯ ಫೀಚರ್ಗಳನ್ನು ಪಡೆಯುತ್ತದೆ ಮತ್ತು ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನೀವು ಅದಕ್ಕೆ ಮತ್ತಷ್ಟು ಆಕ್ಸಸ್ಸರಿಗಳನ್ನು ಸೇರಿಸಬಹುದು. ನೀವು ಸಿಎನ್ಜಿಯೊಂದಿಗೆ ಟೈಸರ್ ಅನ್ನು ಬಯಸಿದರೆ ಇದು ಏಕೈಕ ವೇರಿಯೆಂಟ್ ಆಗಿದೆ. ನೀವು 1.2-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಬಯಸಿದರೆ S+ ವೇರಿಯೆಂಟ್ ಅನ್ನು ಶಿಫಾರಸು ಮಾಡುತ್ತೇವೆ. ನೀವು ಹೆಚ್ಚು ಪರ್ಫಾರ್ಮೆನ್ಸ್-ಆಧಾರಿತ ಮತ್ತು ಹೆಚ್ಚಿನ ಫೀಚರ್ಗಳನ್ನು ಹೊಂದಿರುವ ಪೆಟ್ರೋಲ್ ಮ್ಯಾನುಯಲ್ ಅನ್ನು ಹುಡುಕುತ್ತಿದ್ದರೆ G ವೇರಿಯೆಂಟ್ ಅನ್ನು ಆಯ್ದುಕೊಳ್ಳಬಹುದು.
ಟೊಯೊಟಾ ಟೈಸರ್ ಯಾವ ಫೀಚರ್ ಅನ್ನು ಪಡೆಯುತ್ತದೆ?
ಎಲ್ಇಡಿ ಆಟೋಮ್ಯಾಟಿಕ್ ಹೆಡ್ಲ್ಯಾಂಪ್ಗಳು, ವೈರ್ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಿರುವ 9-ಇಂಚಿನ ಟಚ್ಸ್ಕ್ರೀನ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಹೆಡ್ಸ್-ಅಪ್ ಡಿಸ್ಪ್ಲೇ, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್ಗಳು, ವೈರ್ಲೆಸ್ ಫೋನ್ ಚಾರ್ಜಿಂಗ್, ಕ್ರೂಸ್ ಕಂಟ್ರೋಲ್, ಪ್ಯಾಡಲ್ ಶಿಫ್ಟರ್(ಆಟೋಮ್ಯಾಟಿಕ್ ವೇರಿಯೆಂಟ್ಗಳಲ್ಲಿ), ಹಿಂಭಾಗದ AC ವೆಂಟ್ಗಳು, ಹಿಂಭಾಗದ ವೈಪರ್ ಮತ್ತು ವಾಷರ್, ಮತ್ತು ಆಟೋ ಡಿಮ್ ಆಗುವ ಒಳಭಾಗದಲ್ಲಿರುವ ರಿಯರ್ವ್ಯೂ ಮಿರರ್ ಮತ್ತು ಟಾಪ್ ವೇರಿಯೆಂಟ್ಗಳಲ್ಲಿ 360-ಡಿಗ್ರಿ ಕ್ಯಾಮೆರಾ ಸೇರಿದಂತೆ ಈ ಎಲ್ಲಾ ಪ್ರಮುಖ ಫೀಚರ್ಗಳನ್ನು ಟೈಸರ್ ಹೊಂದಿದೆ. ಆದರೆ, ಪ್ರಸ್ತುತ ಬೇಡಿಕೆಯಿರುವ ಸನ್ರೂಫ್ ಅಥವಾ ವೆಂಟಿಲೇಟೆಡ್ ಸೀಟ್ಗಳನ್ನು ಇದು ಹೊಂದಿಲ್ಲ. ನೀವು ಟೈಸರ್ನ ಇಂಟಿರಿಯರ್ ಮತ್ತು ಎಕ್ಸ್ಟಿರಿಯರ್ಗೆ ಸ್ವಲ್ಪ ವಿಭಿನ್ನವಾದ ಲುಕ್ ಅನ್ನು ನೀಡಲು ಬಯಸಿದರೆ ಟೊಯೊಟಾವು ಇದಕ್ಕೆ ಕೆಲವು ಎಕ್ಸಸ್ಸರಿಗಳನ್ನು ಸಹ ನೀಡುತ್ತದೆ.
ಇದು ಎಷ್ಟು ವಿಶಾಲವಾಗಿದೆ?
ಉತ್ತಮವಾದ ಸ್ಥಳಾವಕಾಶವನ್ನು ಹೊಂದಿರುವುದರಿಂದ ಟೈಸರ್ನಲ್ಲಿ ಐದು ವಯಸ್ಕರನ್ನು ಆರಾಮವಾಗಿ ಕುಳಿತುಕೊಳ್ಳಬಹುದು. ಇದರ ಇಳಿಜಾರಿನ ರೂಫ್ಲೈನ್ 6 ಅಡಿ ಅಥವಾ ಎತ್ತರವಿರುವವರಿಗೆ ಹಿಂಭಾಗದ ಹೆಡ್ರೂಮ್ ಕಡಿಮೆ ಅನಿಸಬಹುದು. ಬೂಟ್ ಸ್ಪೇಸ್ 308 ಲೀಟರ್ ಆಗಿದೆ, ಇದು ದಿನನಿತ್ಯದ ಬಳಕೆಗೆ ಉತ್ತಮವಾಗಿದೆ ಆದರೆ ನೀವು ಹೆಚ್ಚಿನ ಲಗೇಜ್ಗಳನ್ನು ಸಾಗಿಸಿದರೆ ಸ್ವಲ್ಪ ಬಿಗಿಯಾಗಿರಬಹುದು. ಖುಷಿಯ ಸಂಗತಿಯೆಂದರೆ, ಸೀಟ್ಗಳನ್ನು 60:40 ಅನುಪಾತದಲ್ಲಿ ವಿಭಜಿಸಬಹುದು, ಇದು ಹಿಂದಿನ ಪ್ರಯಾಣಿಕರು ಕುಳಿತುಕೊಳ್ಳುವಾಗಲೂ ಹೆಚ್ಚುವರಿ ಲಗೇಜ್ ಅನ್ನು ಸಾಗಿಸಲು ನೀವು ಬಯಸಿದರೆ ಸಹಾಯ ಮಾಡುತ್ತದೆ.
ಯಾವ ಎಂಜಿನ್ ಮತ್ತು ಟ್ರಾನ್ಸ್ಮಿಷನ್ ಆಯ್ಕೆಗಳು ಲಭ್ಯವಿದೆ?
ಟೈಸರ್ ಫ್ರಾಂಕ್ಸ್ನಂತೆಯೇ ಎಂಜಿನ್ ಆಯ್ಕೆಗಳನ್ನು ಹೊಂದಿದೆ:
-
1.2-ಲೀಟರ್ ಪೆಟ್ರೋಲ್ ಎಂಜಿನ್ (90 ಪಿಎಸ್/113 ಎನ್ಎಮ್), ಇದು 5-ಸ್ಪೀಡ್ ಮ್ಯಾನುವಲ್ ಅಥವಾ ಎಎಮ್ಟಿ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ನೊಂದಿಗೆ ಬರುತ್ತದೆ ಮತ್ತು E, S, ಮತ್ತು S+ ವೇರಿಯೆಂಟ್ಗಳಲ್ಲಿ ಲಭ್ಯವಿದೆ.
-
ಹೊಸತಾದ ಮತ್ತು ಫಾಸ್ಟ್ ಆಗಿರುವ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (100ಪಿಎಸ್/148 ಎನ್ಎಮ್), ಇದು 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ನೊಂದಿಗೆ ಬರುತ್ತದೆ
-
ಹೆಚ್ಚು ಮೈಲೇಜ್ ನೀಡುವ 1.2-ಲೀಟರ್ ಪೆಟ್ರೋಲ್-ಸಿಎನ್ಜಿ ಎಂಜಿನ್ (77ಪಿಎಸ್/98.5ಎನ್ಎಮ್) 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ ಜೋಡಿಯಾಗಿದ್ದು, ಮತ್ತು ಇದು G ಮತ್ತು V ವೇರಿಯೆಂಟ್ಗಳಲ್ಲಿ ಮಾತ್ರ ಲಭ್ಯವಿದೆ.
ಟೊಯೊಟಾ ಟೈಸರ್ನ ಮೈಲೇಜ್ ಎಷ್ಟು?
ಮೈಲೇಜ್ ನೀವು ಆಯ್ಕೆ ಮಾಡುವ ಎಂಜಿನ್ ಮತ್ತು ಗೇರ್ಬಾಕ್ಸ್ ಅನ್ನು ಅವಲಂಬಿಸಿರುತ್ತದೆ:
-
ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ ಬರುವ 1.2-ಲೀಟರ್ ಪೆಟ್ರೋಲ್-ಸಿಎನ್ಜಿ ಅತ್ಯುತ್ತಮ ಮೈಲೇಜ್ ಹೊಂದಿದೆ ಎಂದು ಕ್ಲೈಮ್ ಮಾಡಲಾಗಿದ್ದು, ಪ್ರತಿ ಕೆ.ಜಿ.ಗೆ 28.5 ಕಿಮೀ.ವರೆಗೆ ಸಾಗುತ್ತದೆ.
-
ಎಎಮ್ಟಿ ಆಟೋಮ್ಯಾಟಿಕ್ ಗೇರ್ಬಾಕ್ಸ್ನ ರೆಗುಲರ್ 1.2-ಲೀಟರ್ ಪೆಟ್ರೋಲ್ ಎಂಜಿನ್ ಪ್ರತಿ ಲೀ.ಗೆ 22.8 ಕಿ.ಮೀ.ಮೈಲೇಜ್ ಹೊಂದಿದೆ ಎಂದು ಕ್ಲೈಮ್ ಮಾಡಲಾಗಿದೆ. ಇದು ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಹೊಂದಿರುವ ಇದೇ ಎಂಜಿನ್ಗಿಂತ ಸ್ವಲ್ಪ ಉತ್ತಮವಾಗಿದೆ, ಮ್ಯಾನುಯಲ್ ಪ್ರತಿ ಲೀ.ಗೆ 21.7 ಕಿ.ಮೀ.ವರೆಗೆ ಸಾಗಬಲ್ಲದು.
-
1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ನ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಆವೃತ್ತಿಯು ಪ್ರತಿ ಲೀ.ಗೆ 21.1 ಕಿ.ಮೀ.ವರೆಗೆ ಮೈಲೇಜ್ ನೀಡುತ್ತದೆ, ಆದರೆ 1.0-ಲೀಟರ್ ಟರ್ಬೊ-ಪೆಟ್ರೋಲ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆವೃತ್ತಿ ಪ್ರತಿ ಲೀ.ಗೆ 19.8 ಕಿ.ಮೀ.ನಷ್ಟು ಮೈಲೇಜ್ ಹೊಂದಿರುವ ಕನಿಷ್ಠ ಇಂಧನ ದಕ್ಷತೆಯನ್ನು ಹೊಂದಿದೆ.
ಟೊಯೊಟಾ ಟೈಸರ್ ಎಷ್ಟು ಸುರಕ್ಷಿತ?
ಟೈಸರ್ ಆರು ಏರ್ಬ್ಯಾಗ್ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್, ISOFIX ಚೈಲ್ಡ್ ಸೀಟ್ (ಎಲ್ಲಾ ಆವೃತ್ತಿಗಲ್ಲಿ) ಮತ್ತು ಟಾಪ್ ವೇರಿಯೆಂಟ್ಗಳಲ್ಲಿ 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ. ಭಾರತ್ ಎನ್ಸಿಎಪಿಯಲ್ಲಿ ಇದರ ಕ್ರ್ಯಾಶ್-ಟೆಸ್ಟ್ ಇನ್ನೂ ಆಗಿಲ್ಲ.
ಟೈಸರ್ನಲ್ಲಿ ಯಾವ ಬಣ್ಣಗಳ ಆಯ್ಕೆಗಳು ಲಭ್ಯವಿದೆ?
ಟೈಸರ್ ಐದು ಸಿಂಗಲ್ ಬಣ್ಣಗಳಲ್ಲಿ (ಕೆಫೆ ವೈಟ್, ಎಂಟೈಸಿಂಗ್ ಸಿಲ್ವರ್, ಸ್ಪೋರ್ಟಿನ್ ರೆಡ್, ಗೇಮಿಂಗ್ ಗ್ರೇ, ಲುಸೆಂಟ್ ಆರೆಂಜ್) ಮತ್ತು ಕಪ್ಪು ರೂಫ್ನೊಂದಿಗೆ ಮೂರು ಡ್ಯುಯಲ್-ಟೋನ್ (ಸ್ಪೋರ್ಟಿನ್ ರೆಡ್, ಎಂಟೈಸಿಂಗ್ ಸಿಲ್ವರ್, ಕೆಫೆ ವೈಟ್) ಆಯ್ಕೆಗಳಲ್ಲಿ ಲಭ್ಯವಿದೆ. ಲ್ಯೂಸೆಂಟ್ ಆರೆಂಜ್ ಬಣ್ಣವನ್ನು ಟೈಸರ್ನಲ್ಲಿ ಎಕ್ಸ್ಕ್ಲೂಸಿವ್ ಆಗಿ ನೀಡಲಾಗಿದ್ದು ಮತ್ತು ಅತ್ಯಾಧುನಿಕ ನೋಟಕ್ಕಾಗಿ ಕಪ್ಪು ರೂಫ್ನೊಂದಿಗೆ ಎಂಟೈಸಿಂಗ್ ಸಿಲ್ವರ್ ಬಣ್ಣವನ್ನು ನಾವು ಶಿಫಾರಸು ಮಾಡುತ್ತೇವೆ. ಟೈಸರ್ ನೀಲಿ, ಕಪ್ಪು ಅಥವಾ ಕಂದು ಬಣ್ಣದಲ್ಲಿ ಬರುವುದಿಲ್ಲ, ಇದು ಫ್ರಾಂಕ್ಸ್ನಲ್ಲಿ ಲಭ್ಯವಿದೆ.
ಟೊಯೊಟಾ ಟೈಸರ್ ಅನ್ನು ಖರೀದಿಸಬಹುದೇ ?
ಈ ಕಾರಿನಲ್ಲಿ ನೀವು ತಪ್ಪನ್ನು ಹುಡುಕುವುದು ಸ್ವಲ್ಪ ಕಷ್ಟ. ಟೈಸರ್ ವಿಶಾಲವಾಗಿದೆ, ಫೀಚರ್ಗಳೊಂದಿಗೆ ಲೋಡ್ ಆಗಿದೆ ಮತ್ತು ಸುಗಮವಾದ ಡ್ರೈವಿಂಗ್ ಅನುಭವವನ್ನು ನೀಡುತ್ತದೆ. ಫ್ರಾಂಕ್ಸ್ ಮತ್ತು ಟೈಸರ್ನ ಲೋವರ್ ವೇರಿಯೆಂಟ್ಗಳ ನಡುವಿನ ಬೆಲೆ ವ್ಯತ್ಯಾಸವು ಕಡಿಮೆ ಇದೆ, ಆದ್ದರಿಂದ ನಿಮಗೆ ಇಷ್ಟವಾಗುವ ನೋಟ, ಬ್ರ್ಯಾಂಡ್ ಮತ್ತು ಸರ್ವೀಸ್ ಸೆಂಟರ್ ಎಷ್ಟು ಹತ್ತಿರದಲ್ಲಿದೆ ಎಂಬುದನ್ನು ಗಮನಿಸಿಕೊಂಡು ಆಯ್ಕೆ ಮಾಡಬಹುದು.
ನನಗೆ ಪ್ರತಿಸ್ಪರ್ಧಿಗಳು ಯಾವುವು ?
ಮಾರುತಿ ಸುಜುಕಿ ಫ್ರಾಂಕ್ಸ್ ಅನ್ನು ಹೊರತುಪಡಿಸಿ, ನೀವು ಮಹೀಂದ್ರಾ ಎಕ್ಸ್ಯುವಿ300, ನಿಸ್ಸಾನ್ ಮ್ಯಾಗ್ನೈಟ್, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಮಾರುತಿ ಬ್ರೆಝಾ, ಕಿಯಾ ಸೋನೆಟ್, ರೆನಾಲ್ಟ್ ಕಿಗರ್ ಮತ್ತು ಮುಂಬರುವ ಸ್ಕೋಡಾ ಕೈಲಾಕ್ನಂತ ಆಯ್ಕೆಗಳನ್ನು ಪರಿಗಣಿಸಬಹುದು.
ಟೈಸರ್ expert ವಿಮರ್ಶೆ
ನಾವು ಇಷ್ಟಪಡುವ ವಿಷಯಗಳು
- ಹೊರಭಾಗದ ವಿನ್ಯಾಸವು ಫ್ರಾಂಕ್ಸ್ನಿಂದ ಪ್ರತ್ಯೇಕಿಸಲು ಸಾಕಷ್ಟು ಉತ್ತಮವಾಗಿದೆ
- ಸವಾರಿ ಮತ್ತು ನಿರ್ವಹಣೆಯ ನಡುವೆ ಉತ್ತಮ ಸಮತೋಲನವನ್ನು ನೀಡುತ್ತದೆ
- 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಸಂಸ್ಕರಿಸಲಾಗಿದೆ, ಉತ್ಸಾಹಭರಿತ ಮತ್ತು ಮೋಜಿನ ಡ್ರೈವ್ ಆಗಿರಲಿದೆ.
ನಾವು ಇಷ್ಟಪಡದ ವಿಷಯಗಳು
- ಫ್ರಾಂಕ್ಸ್ನಂತೆಯೇ ಡ್ಯಾಶ್ಬೋರ್ಡ್ ಮತ್ತು ಬಣ್ಣದ ಯೋಜನೆಯನ್ನು ಹೊಂದಿದೆ
- ಕೆಲವು ಮಿಸ್ ಆಗಿರುವ ಫೀಚರ್ಗಳು: ವೆಂಟಿಲೇಶನ್ನೊಂದಿಗೆ ಲೆಥೆರೆಟ್ ಸೀಟ್ ಕವರ್ಗಳು ಮತ್ತು ಸನ್ರೂಫ್
- ಹಿಂಭಾಗದ ಹೆಡ್ರೂಮ್ ಬಿಗಿಯಾಗಿರುತ್ತದೆ, ವಿಶೇಷವಾಗಿ ಎತ್ತರದ ಪ್ರಯಾಣಿಕರಿಗೆ
ಟೊಯೋಟಾ ಟೈಸರ್ ವಿಮರ್ಶೆ
ಸ್ಥೂಲ ಸಮೀಕ್ಷೆ
ಅರ್ಬನ್ ಕ್ರೂಸರ್ ಟೈಸರ್ ಅನ್ನು ಪರಿಚಯಿಸುವುದರೊಂದಿಗೆ ಟೊಯೋಟಾ ಭಾರತದಲ್ಲಿ ಅತ್ಯಂತ ಜನಪ್ರಿಯವಾದ ಸಬ್-4 ಮೀಟರ್ ಎಸ್ಯುವಿ ಸೆಗ್ಮೆಂಟ್ಗೆ ಮರು-ಪ್ರವೇಶಿಸಿತು. ಇದು ಮೂಲತಃ ಮಾರುತಿ ಸುಜುಕಿ ಫ್ರಾಂಕ್ಸ್ನ ರೀಬ್ಯಾಡ್ಜ್ ಮಾಡಲಾದ ಆವೃತ್ತಿಯಾಗಿದೆ, ಆದರೆ ಅದರ ವಿಶಿಷ್ಟ ಆಕರ್ಷಣೆಗಾಗಿ ಸಣ್ಣ ವ್ಯತ್ಯಾಸದ ಅಂಶಗಳನ್ನು ಪಡೆಯುತ್ತದೆ. ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ಜನಪ್ರಿಯ ಮೊಡೆಲ್ಗಳಾದ ಟಾಟಾ ಪಂಚ್ / ನೆಕ್ಸಾನ್, ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್ಯುವಿ 3ಎಕ್ಸ್ಒ, ರೆನಾಲ್ಟ್ ಕಿಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ಗಳಿಗೆ ವಿರುದ್ಧ ಸ್ಪರ್ಧೆಯನ್ನು ಒಡ್ಡುತ್ತದೆ.
ನೀವು ಇದನ್ನು ಯಾಕೆ ಖರೀದಿಸಬೇಕು ಎಂಬ ಪ್ರಶ್ನೆಗೆ ಉತ್ತರ ಪಡೆಯಲು ಟೊಯೊಟಾ ಟೈಸರ್ನೊಂದಿಗೆ ನಾವು ಒಂದು ದಿನ ಕಳೆದೆವು.
ಎಕ್ಸ್ಟೀರಿಯರ್
ವಿನ್ಯಾಸ ಯಾವಾಗಲೂ ಹೆಚ್ಚಾಗಿ ವೈಯಕ್ತಿಕ ಮತ್ತು ವ್ಯಕ್ತಿನಿಷ್ಠ ವಿಷಯವಾಗಿದೆ. ಆದರೆ ಟೈಸರ್ ಸ್ವಚ್ಛ ಮತ್ತು ಪ್ರಬುದ್ಧವಾಗಿ ಕಾಣುವ ಕಾರು ಎಂದು ನಾವು ಭಾವಿಸುತ್ತೇವೆ.
ಗ್ರಿಲ್ನ ವಿನ್ಯಾಸವು ಇನ್ನೋವಾ ಹೈಕ್ರಾಸ್ನಿಂದ ಸ್ಪೂರ್ತಿಯನ್ನು ಪಡೆದುಕೊಂಡಿದ್ದು, ಎರಡೂ ಡಿಆರ್ಎಲ್ಗಳನ್ನು ಸಂಪರ್ಕಿಸುವ ನಯವಾದ ಕ್ರೋಮ್ ಬಾರ್ನೊಂದಿಗೆ, ಅದರ ಸಿಗ್ನೇಚರ್ ಅನ್ನು ಅರ್ಬನ್ ಕ್ರೂಸರ್ ಹೈರೈಡರ್ನಿಂದ ಎತ್ತಲಾಗಿದೆ. ಈ ವಿನ್ಯಾಸ ಬದಲಾವಣೆಗಳು ಸೂಕ್ಷ್ಮ ಮತ್ತು ಕಡಿಮೆ ಫ್ಲ್ಯಾಷ್ ಅನ್ನು ಇಷ್ಟಪಡುವವರಿಗೆ ಆಕರ್ಷಣೀಯವಾಗಿಸುತ್ತದೆ.

ಇದನ್ನು ಬದಿಯಿಂದ ಗಮನಿಸುವಾಗ, ಇಲ್ಲಿನ ಮೊದಲ ಬದಲಾವಣೆಯೆಂದರೆ ಹೊಸ 10-ಸ್ಪೋಕ್ ಅಲಾಯ್ ವೀಲ್ಗಳು, ಇದು ಸ್ವಚ್ಛ ಮತ್ತು ಸ್ಪೋರ್ಟಿಯಾಗಿ ಕಾಣುವಂತೆ ಮಾಡುತ್ತದೆ. ಶೀಟ್ ಮೆಟಲ್ ಅಥವಾ ಪ್ಯಾನೆಲ್ಗಳಿಗೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ, ಅದರೆ ನೀವು ಕ್ರಾಸ್ಒವರ್ ನೋಟಕ್ಕಾಗಿ ಇಳಿಜಾರಾದ ರೂಫ್ಲೈನ್ ಮತ್ತು ಒರಟಾದ ಡ್ಯಾಶ್ಗಾಗಿ ಬಾಡಿ ಕ್ಲಾಡಿಂಗ್ ಅನ್ನು ಪಡೆಯುವುದನ್ನು ಮುಂದುವರಿಸುತ್ತೀರಿ.

ಹಿಂಭಾಗದಲ್ಲಿ, ಅರ್ಬನ್ ಕ್ರೂಸರ್ ಹೈರೈಡರ್ನ ಹೊಸ ಲೈಟಿಂಗ್ ಸೆಟಪ್ಗಳನ್ನು ನೀವು ಇಲ್ಲಿ ಗಮನಿಸಬಹುದಾದ ಪ್ರಮುಖ ಬದಲಾವಣೆಯಾಗಿದೆ. ಟಾಪ್-ಸ್ಪೆಕ್ ಜಿ ಮತ್ತು ವಿ ವೇರಿಯೆಂಟ್ಗಳು ಇಲ್ಯುಮಿನೇಟೆಡ್ ಕನೆಕ್ಟೆಡ್ ಎಲ್ಇಡಿ ಟೈಲ್ ಲ್ಯಾಂಪ್ಗಳೊಂದಿಗೆ ಬರುತ್ತವೆ, ಇದು ರಾತ್ರಿಯಲ್ಲಿ ಅದ್ಭುತವಾಗಿ ಕಾಣುತ್ತದೆ.

ಇಂಟೀರಿಯರ್
ಟೊಯೋಟಾ ಟೈಸರ್ಗೆ ಹೊರಭಾಗದಲ್ಲಿ ತನ್ನದೇ ಆದ ಗುರುತನ್ನು ನೀಡುವ ಪ್ರಯತ್ನವನ್ನು ಮಾಡಿದೆ, ಷಾಂಪೇನ್ ಬಣ್ಣದ ಇನ್ಸರ್ಟ್ನೊಂದಿಗೆ ಕಪ್ಪು / ಮರೂನ್ ಡ್ಯಾಶ್ಬೋರ್ಡ್ ಅನ್ನು ಹೊಂದಿದ್ದು, ದುಃಖಕರವೆಂದರೆ, ಟೊಯೋಟಾ ಬ್ಯಾಡ್ಜ್ಗಳನ್ನು ಹೊರತು ಪಡಿಸಿ ಉಳಿದ ಎಲ್ಲವು ಫ್ರಾಂಕ್ಸ್ಗೆ ಹೋಲುತ್ತದೆ. ಟೊಯೋಟಾವು ಗ್ಲಾನ್ಜಾದ ಹಾಗಿನ ಪ್ರಕಾಶಮಾನವಾದ ಥೀಮ್ನ ಕ್ಯಾಬಿನ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.

ಡ್ಯಾಶ್ಬೋರ್ಡ್ನಲ್ಲಿ ಪ್ರಾಬಲ್ಯವು 9-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಆಗಿದೆ, ಇದು ಗರಿಗರಿಯಾದ ಡಿಸ್ಪ್ಲೇಯನ್ನು ಹೊಂದಿದೆ ಮತ್ತು ಉತ್ತಮ ಸ್ಪರ್ಶ ಪ್ರತಿಕ್ರಿಯೆಗಳೊಂದಿಗೆ ಬಳಸಲು ತ್ವರಿತ ಮತ್ತು ಉತ್ಸಾಹಭರಿತವಾಗಿ ಭಾಸವಾಗುತ್ತದೆ. ಸಿಸ್ಟಮ್ ಕನೆಕ್ಟೆಡ್ ಕಾರ್ ತಂತ್ರಜ್ಞಾನವನ್ನು ನೀಡುತ್ತದೆ, ಅಲ್ಲಿ ನೀವು ನಿಮ್ಮ ಸ್ಮಾರ್ಟ್ಫೋನ್ ಅನ್ನು ಸಂಪರ್ಕಿಸಬಹುದು ಮತ್ತು ಕೆಲವು ಫೀಚರ್ಗಳನ್ನು ನಿರ್ವಹಿಸಬಹುದು ಮತ್ತು ಪ್ರಮುಖ ಅಂಕಿಅಂಶಗಳನ್ನು ವೀಕ್ಷಿಸಬಹುದು. ಅದರ ಹೊರತಾಗಿ, ವೈರ್ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಮೂಲಕ ನಿಮ್ಮ ಫೋನ್ ಅನ್ನು ಸಂಪರ್ಕಿಸುವುದು ಸೊಗಸಾಗಿದೆ.

ಆಫರ್ನಲ್ಲಿ ಡ್ರೈವರ್ಗಾಗಿ ಯಾವುದೇ ಡಿಜಿಟಲ್ ಡಿಸ್ಪ್ಲೇ ಇಲ್ಲ. ಆದರೆ ಮತ್ತೊಮ್ಮೆ, ಇಲ್ಲಿ ಯಾವುದೇ ದೂರುಗಳಿಲ್ಲ. ಏಕೆಂದರೆ ಬಿಳಿಯಾದ ಬ್ಯಾಕ್ಗ್ರೌಂಡ್ ಲೈಟ್ಗಳನ್ನು ಹೊಂದಿರುವ ಈ ಅನಲಾಗ್ ಡಯಲ್ಗಳು ಕ್ಲಾಸಿಯಾಗಿ ಕಾಣುತ್ತವೆ ಮತ್ತು ಚಲಿಸುವಾಗ ಓದಲು ಸ್ಪುಟವಾಗಿರುತ್ತವೆ. ಅವುಗಳ ನಡುವೆ ಬಣ್ಣಬಣ್ಣದ ಮಲ್ಟಿ-ಇಂಫಾರ್ಮೆಶನ್ ಡಿಸ್ಪ್ಲೇ ಇದೆ, ಇದು ಪವರ್ ಮತ್ತು ಟಾರ್ಕ್ ರೀಡ್ ಔಟ್ಗಳು, ಇಂಧನ ದಕ್ಷತೆ, ಇಂಧನ ಮುಗಿಯು ದೂರ ಮತ್ತು ಸ್ಮಾರ್ಟ್ ಹೈಬ್ರಿಡ್ ಸಿಸ್ಟಮ್ನ ಕೆಲಸದಂತಹ ಸಾಕಷ್ಟು ಮಾಹಿತಿಯನ್ನು ನೀಡುತ್ತದೆ.

ಗುಣಮಟ್ಟದ ವಿಷಯದಲ್ಲಿ, ಕ್ಯಾಬಿನ್ಅನ್ನು ಪ್ರಮುಖವಾಗಿ ಗಟ್ಟಿಯಾದ ಪ್ಲಾಸ್ಟಿಕ್ಗಳಲ್ಲಿ ಫಿನಿಶ್ ಮಾಡಲಾಗಿದೆ ಮತ್ತು ಗುಣಮಟ್ಟದ ಬಗ್ಗೆ ನಮಗೆ ಯಾವುದೇ ದೂರುಗಳಿಲ್ಲದಿದ್ದರೂ, ವಿನ್ಯಾಸದ ಫಿನಿಶ್ ಅನ್ನು ಇನ್ನೂ ಉತ್ತಮವಾಗಿಸಬಹುದಿತ್ತು. ಅಲ್ಲದೆ, ಈ ಬೆಲೆಯಲ್ಲಿ, ಡ್ಯಾಶ್ಬೋರ್ಡ್ನಲ್ಲಿ ಕೆಲವು ಪ್ರೀಮಿಯಂ ಮೆಟಿರಿಯಲ್ಗಳನ್ನು ನಾವು ನಿರೀಕ್ಷಿಸುತ್ತೇವೆ. ಆದರೆ ಅದೃಷ್ಟವಶಾತ್, ಮೊಣಕೈ ರೆಸ್ಟ್ ಮತ್ತು ಸೆಂಟರ್ ಆರ್ಮ್ರೆಸ್ಟ್ನಂತಹ ಟಚ್ ಪಾಯಿಂಟ್ಗಳು ಮೃದುವಾದ ಪ್ಯಾಡಿಂಗ್ ಅನ್ನು ಹೊಂದಿವೆ. ಕ್ಯಾಬಿನ್ನಾದ್ಯಂತ ಫಿಟ್ ಮತ್ತು ಫಿನಿಶ್ಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿಲ್ಲ, ಇದನ್ನು ಚೆನ್ನಾಗಿ ಜೋಡಿಸಲಾಗಿದೆ.

ಫೀಚರ್ಗಳು
ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ನಿಮ್ಮನ್ನು ತೃಪ್ತಿಪಡಿಸಲು ಎಲ್ಲಾ ಫೀಚರ್ಗಳನ್ನು ಹೊಂದಿದೆ. ಟಾಪ್-ಎಂಡ್ ವೆರಿಯೆಂಟ್ನಲ್ಲಿನ ಪ್ರಮುಖ ಹೈಲೈಟ್ಸ್ಗಳೆಂದರೆ 9-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ವೈರ್ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಕನೆಕ್ಟೆಡ್ ಕಾರ್ ಟೆಕ್, ವೈರ್ಲೆಸ್ ಫೋನ್ ಚಾರ್ಜರ್, 6-ಸ್ಪೀಕರ್ ಆರ್ಕಮಿಸ್ ಟ್ಯೂನ್ಡ್ ಸೌಂಡ್ ಸಿಸ್ಟಮ್, ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟೀರಿಂಗ್ ಎಡ್ಜಸ್ಟ್ಮೆಂಟ್, ಕೀಲೆಸ್ ಎಂಟ್ರಿ ಮತ್ತು ಪುಶ್ ಬಟನ್ ಸ್ಟಾರ್ಟ್ ಆಗಿದೆ.

ಲೋವರ್-ಎಂಡ್ ವೇರಿಯೆಂಟ್ಗಳು ಸಹ ಸುಸಜ್ಜಿತವಾಗಿವೆ, ಇದು 7-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ (ಬೇಸ್ ವೇರಿಯಂಟ್ನಲ್ಲಿ ಲಭ್ಯವಿಲ್ಲ), ಟಿಲ್ಟ್ ಹೊಂದಾಣಿಕೆ ಮಾಡಬಹುದಾದ ಸ್ಟೀರಿಂಗ್ ವೀಲ್, ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್ಗಳು ಮತ್ತು ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ (ಸ್ಟ್ಯಾಂಡರ್ಡ್ ಆಗಿ) ನಂತಹ ಫೀಚರ್ಗಳನ್ನು ಪ್ಯಾಕ್ ಮಾಡಿದೆ. ಆದರೆ, ಮುಂಭಾಗದ ನಿವಾಸಿಗಳಿಗೆ ವೆಂಟಿಲೇಶನ್ನೊಂದಿಗೆ ಲೆಥೆರೆಟ್ ಸೀಟ್ಗಳನ್ನು ಮತ್ತು ಸನ್ರೂಫ್ ಅನ್ನು ನೀಡಿದರೆ ಫೀಚರ್ನ ಪ್ಯಾಕೇಜ್ ಪೂರ್ತಿಗೊಂಡಂತೆ ಎಂದು ನಾವು ಭಾವಿಸುತ್ತೇವೆ.

ಕಂಫರ್ಟ್
ಮುಂಭಾಗದಲ್ಲಿ, ಆಸನಗಳು ಉತ್ತಮ ಸೌಕರ್ಯವನ್ನು ನೀಡುತ್ತವೆ ಮತ್ತು ಇದರ ಮೃದುವಾದ ಕುಶನ್, ವಿಶಾಲವಾದ ಚೌಕಟ್ಟುಗಳೊಂದಿಗೆ ಪ್ರಯಾಣಿಕರಿಗೆ ಉತ್ತಮ ಅನುಭವವನ್ನು ನೀಡುತ್ತದೆ. ಇವುಗಳು ನಿಮಗೆ ಉತ್ತಮ ಲ್ಯಾಟರಲ್ ಸಪೋರ್ಟ್ ಅನ್ನು ನೀಡುತ್ತದೆ ಮತ್ತು ತೊಡೆಯ ಕೆಳಭಾಗದ ಬೆಂಬಲದ ಬಗ್ಗೆ ಯಾವುದೇ ದೂರುಗಳಿಲ್ಲ. ಆಸನಗಳು ತುಂಬಾ ಮೃದುವಾಗಿದೆ, ಆದರೆ ಲಾಂಗ್ ಡ್ರೈವ್ಗಳಲ್ಲಿ ಉತ್ತಮ ಕಂಪರ್ಟ್ಗಾಗಿ ಕುಶನ್ ಸ್ವಲ್ಪ ಹಾರ್ಡ್ ಆಗಿದ್ದರೆ ಇನ್ನೂ ಉತ್ತಮ ಎನ್ನುವುದು ನಮ್ಮ ಅಭಿಪ್ರಾಯ.

ಇನ್ನು ಹಿಂದಿನ ಸೀಟ್ನ ಕಂಫರ್ಟ್ ಅನ್ನು ನಾವು ಗಮನಿಸುವಾಗ, ತುಂಬಾ ಪ್ರೀಮಿಯಂ ಆಗಿರುವ ಹೆಡ್ರೂಮ್ ನಾವು ಗಮನಿಸುವ ಮೊದಲ ವಿಷಯ. ಈ ಲೇಖಕರು 5.8 ಅಡಿ ಎತ್ತರವಿದ್ದು, ಮತ್ತು ಅವರ ಕೂದಲು ಬಹುತೇಕ ರೂಫ್ಗೆ ತಾಗುತ್ತಿತ್ತು. ಆಸನದ ಹಿಂಭಾಗದ ಆಂಗಲ್ ನೇರ ಭಾಗದಲ್ಲಿರುತ್ತದೆ ಮತ್ತು ರೂಫ್ನ ಆಕಾರದ ಕಾರಣದಿಂದಾಗಿ, ಹಿಂಬದಿಯ ವಿಂಡೋದಿಂದ ಹೊರಗೆ ನೋಡಲು ನೀವು ಸ್ವಲ್ಪ ಕೆಳಗೆ ಬಗ್ಗಬೇಕಾಗುತ್ತದೆ.

ಧನಾತ್ಮಕ ಅಂಶವನ್ನು ಗಮನಿಸಿದರೆ, ನೀವು ಉತ್ತಮವಾದ ಕೆಳ ತೊಡೆಯ ಬೆಂಬಲವನ್ನು ಪಡೆಯುತ್ತೀರಿ ಮತ್ತು ನಿಮ್ಮ ಬೆನ್ನಿಗೆ ಲ್ಯಾಟರಲ್ ಸಪೋರ್ಟ್ ಉತ್ತಮವಾಗಿದೆ. ಲೆಗ್ರೂಮ್ ಸಹ ಉತ್ತಮವಾಗಿದೆ ಮತ್ತು ಈ ಲೇಖಕರು ಪಾದವಿಡುವಲ್ಲಿ ಸಾಕಷ್ಟು ಜಾಗವನ್ನು ಪಡೆದಿದ್ದರಿಂದ ನನ್ನ ಡ್ರೈವಿಂಗ್ ಸೀಟ್ನ ಹಿಂದೆ ವಿಸ್ತರಿಸಲು ಹೆಚ್ಚಿನ ಸ್ಥಳವನ್ನು ಹೊಂದಿದ್ದರು. ಎರಡು ಆರು ಅಡಿ ಎತ್ತರದವರೂ ಸಹ ಆರಾಮವಾಗಿ ಒಬ್ಬರ ಹಿಂದೆ ಒಬ್ಬರು ಕುಳಿತುಕೊಳ್ಳಬಹುದು. ಬೆಂಚ್ ಸಾಕಷ್ಟು ಅಗಲವಾಗಿದ್ದು, ಎರಡು ಮಧ್ಯಮ ಗಾತ್ರದ ಪ್ರಯಾಣಿಕರೊಂದಿಗೆ ಒಂದು ಸಣ್ಣ ಮಗು ಅರಾಮವಾಗಿ ಪ್ರಯಾಣಿಸಬಹುದು. ಆದರೆ ನೀವು ಸ್ವಲ್ಪ ದಪ್ಪ ಇದ್ದರೆ, ಈ ಆಸನವು ಇಬ್ಬರು ಪ್ರಯಾಣಿಕರಿಗೆ ಮಾತ್ರ ಉತ್ತಮವಾಗಿದೆ.
ಹಿಂಬದಿಯ ಸೀಟಿನಲ್ಲಿ ಕುಳಿತುಕೊಳ್ಳುವವರಿಗೆ ಹೆಚ್ಚುವರಿ ಸೌಕರ್ಯಕ್ಕಾಗಿ ಎಸಿ ವೆಂಟ್ಗಳನ್ನು ನೀಡಲಾಗುತ್ತದೆ ಮತ್ತು ನಿಮ್ಮ ಸಾಧನವನ್ನು ಚಾರ್ಜ್ ಮಾಡಲು ಚಾರ್ಜಿಂಗ್ ಪೋರ್ಟ್ಗಳಿವೆ. ಈ ಬೆಲೆಯಲ್ಲಿ ಸೆಂಟರ್ ಆರ್ಮ್ಸ್ಟ್ರೆಸ್ಟ್ ಅತ್ಯಗತ್ಯವಾಗಿರುತ್ತದೆ ಮತ್ತು ಇದನ್ನು ನೀಡದಿರುವುದು ಖಂಡಿತವಾಗಿಯೂ ಒಂದು ಋನಾತ್ಮಕ ಅಂಶವಾಗಿದೆ. ಅನುಭವವನ್ನು ಉತ್ತಮಗೊಳಿಸಲು, ಟೊಯೋಟಾ ಹಿಂಭಾಗದ ಸನ್ ಬ್ಲೈಂಡ್ಗಳನ್ನು ಸಹ ನೀಡಬಹುದಿತ್ತು.

ಕ್ಯಾಬಿನ್ನ ಪ್ರಯೋಗಿಕತೆ
ಕ್ಯಾಬಿನ್ ಪ್ರಾಯೋಗಿಕತೆಯ ವಿಷಯದಲ್ಲಿ, ಎಲ್ಲಾ ನಾಲ್ಕು ಬಾಗಿಲುಗಳಲ್ಲಿ ಒಂದು-ಲೀಟರ್ ಬಾಟಲಿಗಳನ್ನು ಮತ್ತು ನಿಮ್ಮ ಇತರ ಸಣ್ಣ-ಸಣ್ಣ ವಸ್ತುಗಳನ್ನು ಸಂಗ್ರಹಿಸಲು ಸಾಕಷ್ಟು ಸ್ಥಳಾವಕಾಶವನ್ನು ಹೊಂದಿದೆ. ನಿಮ್ಮ ಪಾನೀಯಗಳು ಅಥವಾ ಕಾಫಿಯನ್ನು ಸಂಗ್ರಹಿಸಲು ಮಧ್ಯದಲ್ಲಿ ಕೆಳಗಿರುವ ಕನ್ಸೋಲ್ನಲ್ಲಿ ಎರಡು ಕಪ್ ಹೋಲ್ಡರ್ಗಳಿವೆ. ಮತ್ತು ನೀವು ಆರ್ಮ್ರೆಸ್ಟ್ನ ಕೆಳಗೆ ಸಣ್ಣ ಸ್ಟೋರೇಜ್ ಜಾಗವನ್ನು ಸಹ ಪಡೆಯುತ್ತೀರಿ. ಗ್ಲೋವ್ ಬಾಕ್ಸ್ ಯೋಗ್ಯವಾದ ಗಾತ್ರವನ್ನು ಹೊಂದಿದೆ, ಆದರೆ ಇದು ಹೇಳುವಷ್ಟು ದೊಡ್ಡದಾಗಿಲ್ಲ. ಅಲ್ಲದೆ, ಮುಂಭಾಗದ ಎರಡೂ ಸೀಟುಗಳ ಹಿಂದೆ ಸೀಟ್ ಬ್ಯಾಕ್ ಪಾಕೆಟ್ ಅನ್ನು ಹೊಂದಿದ್ದು, ಪ್ರಯಾಣಿಕರ ಸೀಟಿನಷ್ಟೇ ಅಲ್ಲ, ಪ್ರಾಥಮಿಕವಾಗಿ ಹಿಂದಿನ ಸೀಟುಗಳನ್ನು ಬಳಸುವವರಿಗೆ ಸ್ವಾಗತಾರ್ಹ ಸಂಗತಿಯಾಗಿದೆ.


ಸುರಕ್ಷತೆ
ಸುರಕ್ಷತೆಯ ದೃಷ್ಟಿಯಿಂದ, ಟೈಸರ್ ಆರು ಏರ್ಬ್ಯಾಗ್ಗಳೊಂದಿಗೆ (ಲೋವರ್ ವೇರಿಯೆಂಟ್ಗಳು ಎರಡನ್ನು ಪಡೆಯುತ್ತವೆ), ಇಬಿಡಿ ಜೊತೆಗೆ ಎಬಿಎಸ್, 360-ಡಿಗ್ರಿ ಕ್ಯಾಮೆರಾದೊಂದಿಗೆ ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್ಗಳೊಂದಿಗೆ ಪ್ಯಾಕ್ ಮಾಡಲ್ಪಟ್ಟಿದೆ.
ಬೂಟ್ನ ಸಾಮರ್ಥ್ಯ
ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ಉತ್ತಮವಾದ ಆಯತಾಕಾರದ ಆಕಾರವನ್ನು ಹೊಂದಿರುವ 308-ಲೀಟರ್ ಬೂಟ್ ಅನ್ನು ಪಡೆಯುತ್ತದೆ. ಇದರಲ್ಲಿ ಮೃದುವಾದ ಬ್ಯಾಗ್ಗೆ ಸಾಕಷ್ಟು ಸ್ಥಳಾವಕಾಶದೊಂದಿಗೆ ಒಂದು ದೊಡ್ಡ, ಮಧ್ಯಮ ಮತ್ತು ಸಣ್ಣ ಸೂಟ್ಕೇಸ್ ಅನ್ನು ಇಡಬಹುದು. ಇದರರ್ಥ ಇದು ನಿಮ್ಮ ರಸ್ತೆ ಪ್ರಯಾಣ/ವಿಮಾನ ನಿಲ್ದಾಣದ ಹೋಗಬೇಕಾದ ಸಮಯದಲ್ಲಿ ಸಾಕಷ್ಟು ಲಗೇಜ್ಗಳನ್ನು ಸಾಗಿಸಬಹುದು. ಇದರಲ್ಲಿರುವ ಏಕೈಕ ನ್ಯೂನತೆ ಎಂದರೆ ಅದರ ಎತ್ತರದ ಲೋಡಿಂಗ್ ಲಿಪ್ ಆಗಿದೆ, ಇದು ಭಾರವಾದ ಲಗೇಜ್ಗಳನ್ನು ಲೋಡ್ ಮಾಡುವಾಗ ಮತ್ತು ಇಳಿಸುವಾಗ ಅನಾನುಕೂಲತೆಯನ್ನು ಉಂಟುಮಾಡುತ್ತದೆ.


ಕಾರ್ಯಕ್ಷಮತೆ
ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ಅನ್ನು ಮೂರು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ: ಅವುಗಳೆಂದರೆ 1.2-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್ ಪೆಟ್ರೋಲ್, 1.2-ಲೀಟರ್ ಸಿಎನ್ಜಿ ಮತ್ತು 1-ಲೀಟರ್ ಟರ್ಬೊ-ಪೆಟ್ರೋಲ್. 5-ಸ್ಪೀಡ್ ಮ್ಯಾನುಯಲ್ ಸ್ಟ್ಯಾಂಡರ್ಡ್ ಆಗಿ ಲಭ್ಯವಿದೆ, ಆದರೆ ಆಟೋಮ್ಯಾಟಿಕ್ ಆಯ್ಕೆಗಳು ನ್ಯಾಚುರಲಿ ಎಸ್ಪಿರೇಟೆಡ್ ಪೆಟ್ರೋಲ್ಗಾಗಿ 5-ಸ್ಪೀಡ್ AMT ಮತ್ತು ಟರ್ಬೊ-ಪೆಟ್ರೋಲ್ಗಾಗಿ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಅನ್ನು ಒಳಗೊಂಡಿವೆ.
ಟೈಸರ್ನ ವಿಶೇಷಣಗಳ ವಿವರವಾದ ನೋಟ ಇಲ್ಲಿದೆ:
| 1.2-ಲೀಟರ್ ಪೆಟ್ರೋಲ್ | 1.2-ಲೀಟರ್ ಸಿಎನ್ಜಿ | 1-ಲೀಟರ್ ಟರ್ಬೋ ಪೆಟ್ರೋಲ್ | |
| ಪವರ್ (ಪಿಎಸ್) | 90 ಪಿಎಸ್ | 77.5 ಪಿಎಸ್ | 100 ಪಿಎಸ್ |
| ಟಾರ್ಕ್ (ಎನ್ಎಮ್) | 113 ಎನ್ಎಮ್ | 98.5 ಎನ್ಎಮ್ | 148 ಎನ್ಎಮ್ |
| ಗೇರ್ ಬಾಕ್ಸ್ ಆಯ್ಕೆಗಳು | 5-ಸ್ಪೀಡ್ ಮ್ಯಾನುಯಲ್ / 5-ಸ್ಪೀಡ್ ಎಎಮ್ಟಿ | 5-ಸ್ಪೀಡ್ ಮ್ಯಾನುಯಲ | 5-ಸ್ಪೀಡ್ ಮ್ಯಾನುಯಲ್ / 6-ಸ್ಪೀಡ್ ಆಟೋಮ್ಯಾಟಿಕ್ |
| ಕ್ಲೈಮ್ ಮಾಡಿರುವ ಇಂಧನ ದಕ್ಷತೆ | ಪ್ರತಿ ಲೀ.ಗೆ 21.71 ಕಿ.ಮೀ(ಮ್ಯಾನುವಲ್) / ಪ್ರತಿ ಲೀ.ಗೆ 22.79 ಕಿ.ಮೀ (AMT) | ಪ್ರತಿ ಕೆ.ಜಿಗೆ 28.51 ಕಿ.ಮೀ | ಪ್ರತಿ ಲೀ.ಗೆ 21.18 ಕಿ.ಮೀ (ಮ್ಯಾನುವಲ್) / ಪ್ರತಿ ಲೀ.ಗೆ 19.86 ಕಿ.ಮೀ (AMT) |
ಈ ಪರೀಕ್ಷೆಗಾಗಿ, ನಾವು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದೆವು, ಮತ್ತು ಅದನ್ನು ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ನೊಂದಿಗೆ ಜೋಡಿಸಲಾಗಿದೆ. ಚಲಿಸುತ್ತಿರುವಾಗ, ನಾವು ಅನುಭವಿಸಿದ ಅತ್ಯಂತ ಪರಿಷ್ಕೃತ ಮತ್ತು ವೈಬ್-ಮುಕ್ತ ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ಗಳಲ್ಲಿ ಒಂದು ಎಂದು ನಮಗೆ ಅನಿಸಿದೆ.

ಗೇರ್ ಅನ್ನು ಡ್ರೈವ್ಗೆ ಸ್ಲಾಟ್ ಮಾಡಿ ಮತ್ತು ಬ್ರೇಕ್ ಅನ್ನು ಮೇಲಕ್ಕೆತ್ತಿ ಮತ್ತು ಟೈಸರ್ ನಿಧಾನವಾಗಿ ಮುಂದಕ್ಕೆ ಚಲಿಸುತ್ತದೆ. ಎಂಜಿನ್ 2,000 ಆರ್ಪಿಎಂ ನಂತರವು ಅದೇ ಉತ್ಸಾಹವನ್ನು ಹೊಂದಿರುತ್ತದೆ ಮತ್ತು ಇದು ನಿಜವಾಗಿಯೂ ಉತ್ತಮವಾದ ರೇಖೀಯ ಪುಲ್ನೊಂದಿಗೆ ತನ್ನ ದಾಪುಗಾಲು ಹಾಕಲು ಪ್ರಾರಂಭಿಸುತ್ತದೆ. ಅದರ ಸಣ್ಣ ಸ್ಥಳಾಂತರದ ಹೊರತಾಗಿಯೂ, ಈ ಇಂಜಿನ್ ಎಂದಿಗೂ ಶಕ್ತಿಹೀನತೆಯನ್ನು ಅನುಭವಿಸುವುದಿಲ್ಲ ಮತ್ತು ನಗರ ಪ್ರಯಾಣ ಮತ್ತು ದೀರ್ಘ ಹೆದ್ದಾರಿಯ ಪ್ರಯಾಣ ಎರಡರಲ್ಲೂ ಇದು ಶಕ್ತಿ ಮೀರಿ ಕೆಲಸ ಮಾಡುತ್ತದೆ.
ಪಟ್ಟಣದಲ್ಲಿ ಕಾರ್ಯಕ್ಷಮತೆಯು ಸಾಕಷ್ಟು ಹೆಚ್ಚು ಮತ್ತು ಟೈಸರ್ ವೇಗವಾಗಿ ಹರಿಯುವ ದಟ್ಟಣೆಯಲ್ಲಿಯೂ ಇದೇ ಪರ್ಫಾರ್ಮೆನ್ಸ್ ಅನ್ನು ನೀಡುತ್ತದೆ. ಇಂಧನ ಆರ್ಥಿಕತೆಯ ಹಿತಾಸಕ್ತಿಯಲ್ಲಿ ಗೇರ್ಬಾಕ್ಸ್ ಗೇರ್ಗಳನ್ನು ಆರಂಭಿಕ ರೇಂಜ್ನಲ್ಲಿ ಬದಲಾಯಿಸುತ್ತದೆ. ಡೌನ್ಶಿಫ್ಟ್ಗಳು ಸ್ವಲ್ಪ ಕ್ಷಿಪ್ರವಾಗಿದ್ದರೆ ಉತ್ತಮವಾಗಬಹುದಿತ್ತು ಮತ್ತು ಅದು ವೇಗವಾಗಿ ಓವರ್ಟೇಕ್ಗಳನ್ನು ಮಾಡುತ್ತಿತ್ತು. ಆದರೆ ಒಂದು ಪರಿಹಾರವಿದೆ: ಡೌನ್ಶಿಫ್ಟ್ಗೆ ಪ್ಯಾಡಲ್ ಶಿಫ್ಟರ್ನಲ್ಲಿ ತ್ವರಿತವಾದ ಡಬ್ ಮತ್ತು ಓವರ್ಟೇಕ್ ಅನ್ನು ಕಾರ್ಯಗತಗೊಳಿಸಲು ನೀವು ಉತ್ತಮವಾದ ಶಕ್ತಿಯನ್ನು ಪಡೆಯುತ್ತೀರಿ.
ಹೈವೇಗಳಲ್ಲಿ ಈ ಎಂಜಿನ್ ಹೊಳೆಯುತ್ತದೆ. ಕಾರ್ಯಕ್ಷಮತೆಯು ಚುರುಕಾಗಿರುತ್ತದೆ ಮತ್ತು ಟೈಸರ್ ಮೂರು ಅಂಕೆಗಳವರೆಗೆ ವೇಗವಾಗಿ ಏರುತ್ತದೆ. ಎತ್ತರದ ಆರನೇ ಗೇರ್ ಎಂದರೆ ಎಂಜಿನ್ 100 ಕಿಮೀ ವೇಗದಲ್ಲಿ ಕೇವಲ 2,000 ಆರ್ಪಿಎಂ ಸುತ್ತುತ್ತದೆ, ಇದು ಉತ್ತಮ ಹೆದ್ದಾರಿ ಕ್ರೂಸರ್ ಆಗಿರುತ್ತದೆ.

ಮತ್ತು ನೀವು ಸ್ವಲ್ಪ ಮೋಜಿನ ಮನಸ್ಥಿತಿಯಲ್ಲಿದ್ದರೆ, ಟೈಸರ್ನಲ್ಲಿ ಆಯ್ಕೆ ಮಾಡಲು ಇದು ಎಂಜಿನ್ ಆಗಿದೆ. ಗೇರ್ಬಾಕ್ಸ್ ಅನ್ನು ಮ್ಯಾನುವಲ್ ಮೋಡ್ಗೆ ಸ್ಲಾಟ್ ಮಾಡಿ, ಪ್ಯಾಡಲ್ಗಳನ್ನು ಬಳಸಿ, ಉತ್ತಮವಾದ ಟ್ವಿಸ್ಟಿಗಳನ್ನು ಹುಡುಕಿ ಮತ್ತು ಟೈಸರ್ ನಿಮ್ಮ ಮುಖದಲ್ಲಿ ನಗುವನ್ನು ಮೂಡಿಸುತ್ತದೆ. ಉಚಿತ ರಿವ್ವಿಂಗ್ ಎಂಜಿನ್ ಗಟ್ಟಿಯಾಗಿ ಸುತ್ತುವುದನ್ನು ಇಷ್ಟಪಡುತ್ತದೆ ಮತ್ತು ನೀವು ಅದನ್ನು ರೆಡ್ಲೈನ್ವರೆಗೆ ತಳ್ಳಿದರೂ ಅದು ದೂರು ನೀಡುವುದಿಲ್ಲ.
ಈ ಸಂಪೂರ್ಣ ಪ್ಯಾಕೇಜ್ನ ಏಕೈಕ ತೊಂದರೆಯೆಂದರೆ ಸ್ಟಾರ್ಟ್ ಸ್ಟಾಪ್ ಸಿಸ್ಟಮ್ ಕಾರ್ಯನಿರ್ವಹಿಸುವ ವಿಧಾನವಾಗಿದೆ. ವಾಹನವು ಸ್ಥಗಿತಗೊಳ್ಳುವ ಮೊದಲೇ ಇದು ಸಕ್ರಿಯಗೊಳ್ಳುತ್ತದೆ ಮತ್ತು ಕಿರಿಕಿರಿಯುಂಟುಮಾಡುತ್ತದೆ, ವಿಶೇಷವಾಗಿ ಚಲಿಸುವ ಬಂಪರ್ ಟು ಬಂಪರ್ ಟ್ರಾಫಿಕ್ನಲ್ಲಿ ಡ್ರೈವ್ ಮಾಡುವಾಗ. ಅದನ್ನು ಸಂಪೂರ್ಣವಾಗಿ ಸ್ವಿಚ್ ಆಫ್ ಮಾಡಲು ಮತ್ತು ನೀವು ದೀರ್ಘ ಸರದಿಯಲ್ಲಿ ಕಾಯುತ್ತಿದ್ದರೆ ಮಾತ್ರ ಅದನ್ನು ಬಳಸಲು ನಾವು ಶಿಫಾರಸು ಮಾಡುತ್ತೇವೆ.
ರೈಡ್ ಅಂಡ್ ಹ್ಯಾಂಡಲಿಂಗ್
ಟೊಯೊಟಾ ಟೈಸರ್ನ ಸಸ್ಪೆನ್ಸನ್ ಸವಾರಿ ಮತ್ತು ನಿರ್ವಹಣೆಯ ನಡುವೆ ಉತ್ತಮ ಸಮತೋಲನವನ್ನು ನೀಡುತ್ತದೆ. ಸವಾರಿಯು ತುಂಬಾ ಆರಾಮದಾಯಕವಾಗಿದೆ ಮತ್ತು ಗುಂಡಿಗಳು, ಏರಿಳಿತಗಳು ಮತ್ತು ಕಳಪೆ ರಸ್ತೆಗಳು ಅದರ ಶಾಂತತೆಯ ಮೇಲೆ ಪರಿಣಾಮ ಬೀರುವುದಿಲ್ಲ. ಅದರ 190 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಇರುವುದರಿಂದ ಕೆಟ್ಟ ರಸ್ತೆಗಳ ಮೇಲೆ ನೀವು ನಿಧಾನಗೊಳಿಸಬೇಕಾಗಿಲ್ಲ. ಇದು ನಿಜವಾಗಿಯೂ ಕಳಪೆ ಮತ್ತು ಚೂಪಾದ ಗುಂಡಿಗಳು ಮಾತ್ರ ತೀಕ್ಷ್ಣವಾದ ಥಡ್ನೊಂದಿಗೆ ಸಸ್ಪೆನ್ಸನ್ ಅನ್ನು ಹಿಡಿಯುತ್ತವೆ, ಇಲ್ಲದಿದ್ದರೆ ಸ್ಪೀಡ್ ಬ್ರೇಕರ್ಗಳು ಮತ್ತು ಕಳಪೆ ರಸ್ತೆಗಳ ಮೇಲೆ ಹೋಗುವುದು ಸಮತಟ್ಟಾದ ಮತ್ತು ಸುಲಭವಾಗಿರುತ್ತದೆ.

ಮೂರು ಅಂಕೆಗಳ ವೇಗದಲ್ಲಿಯೂ ಸಹ, ಟೈಸರ್ ಏರಿಳಿತಗಳು ಮತ್ತು ರಸ್ತೆ ಜಾಯಿಂಟ್ಗಳಲ್ಲಿ ಉತ್ತಮವಾಗಿ ಸಂಯೋಜಿಸಲ್ಪಡುತ್ತದೆ, ಕ್ಯಾಬಿನ್ ಅನ್ನು ಅಸ್ಥಿರಗೊಳಿಸುವುದಿಲ್ಲ. ನೇರವಾದ ರಸ್ತೆಗಳಲ್ಲಿ ಸಹ ಸ್ಥಿರತೆಯು ಶ್ಲಾಘನೀಯವಾಗಿದೆ ಮತ್ತು ಟೈಸರ್ನಲ್ಲಿ ಲಾಂಗ್ ಡ್ರೈವ್ ಮಾಡುವುದು ಯಾವುದೇ ರೀತಿಯ ಕಷ್ಟದ ಕೆಲಸ ಅಲ್ಲ. ಈ ಸೆಟಪ್ ನಿರ್ವಹಣೆಯ ವೆಚ್ಚದಲ್ಲಿ ಬರುವುದಿಲ್ಲವಾದ್ದರಿಂದ ನೀವು ಫನ್ ಮೂಡ್ನಲ್ಲಿದ್ದರೂ ಅದು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ.

ನೀವು ಎತ್ತರದ ಪ್ರದೇಶಗಳಿಗೆ ಹೋಗುತ್ತಿದ್ದರೆ ಮತ್ತು ರಸ್ತೆಯ ಉತ್ತಮ ಗಾಳಿಯ ವಿಭಾಗವನ್ನು ಕಂಡುಕೊಂಡರೆ - ಟೈಸರ್ ವಿನೋದವನ್ನು ಅನುಭವಿಸುತ್ತದೆ ಮತ್ತು ಆತ್ಮವಿಶ್ವಾಸವನ್ನು ಪ್ರೇರೇಪಿಸುತ್ತದೆ. ಮತ್ತು ಅದರ ಸಸ್ಪೆನ್ಸನ್ನ ಸಮತೋಲನದ ಕಾರಣ, ನೀವು ತಿರುವು ಮೂಲಕ ವೇಗವಾಗಿ ಲೈನ್ ಅನ್ನು ತೆಗೆದುಕೊಳ್ಳುವಾಗ ಪ್ರಯಾಣಿಕರು ಸಹ ವಾಕರಿಕೆ ಅನುಭವಿಸುವುದಿಲ್ಲ. ಅನುಭವವನ್ನು ಹೆಚ್ಚಿಸುವುದರಲ್ಲಿ ಸ್ಟೀರಿಂಗ್ ಸಹ ಒಂದಾಗಿದ್ದು, ಅದು ವೇಗ ಹೆಚ್ಚಾದಂತೆ ಸಮರ್ಪಕವಾಗಿ ತೂಗುತ್ತದೆ ಮತ್ತು ಟರ್ನ್ಗಳಲ್ಲಿ ತಳ್ಳುವಾಗಲೂ ನೀವು ನಿಯಂತ್ರಣದಲ್ಲಿರಲು ಅನುವು ಮಾಡಿಕೊಡುತ್ತದೆ.
ವರ್ಡಿಕ್ಟ್
ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ಒಂದು ಸ್ಟೈಲಿಶ್ ಲುಕಿಂಗ್ ಕಾರ್ ಆಗಿದ್ದು, ಸಮಯ ಕಳೆಯಲು ಹಿತಕರವಾದ ಇಂಟೀರಿಯರ್ ಅನ್ನು ಹೊಂದಿದೆ, ನಾಲ್ಕು ಪ್ರಯಾಣಿಕರಿಗೆ ಆರಾಮದಾಯಕವಾಗಿದೆ ಮತ್ತು ದೈನಂದಿನ ಬಳಕೆಗೆ ಅಗತ್ಯವಿರುವ ಎಲ್ಲಾ ಫೀಚರ್ಗಳನ್ನು ಹೊಂದಿದೆ. ಆದರೆ, ಪ್ಯಾಕೇಜ್ ಪೂರ್ಣಗೊಂಡಿಲ್ಲ. ಸನ್ರೂಫ್, ವೆಂಟಿಲೇಶನ್ನೊಂದಿಗೆ ಲೆಥೆರೆಟ್ ಸೀಟ್ ಕವರ್ಗಳು ಮತ್ತು ಹಿಂಭಾಗದಲ್ಲಿ ಮಧ್ಯದ ಆರ್ಮ್ರೆಸ್ಟ್ನಂತಹ ಕೆಲವು ಕಾಣೆಯಾದ ಬಿಟ್ಗಳಾಗಿವೆ. ಈ ಬೆಲೆಯಲ್ಲಿ ಇಂತಹ ಫೀಚರ್ಗಳು ಅತ್ಯಗತ್ಯವಾಗಿರುತ್ತದೆ. ಇದಲ್ಲದೆ, ವಿಭಿನ್ನ ಬಣ್ಣದ ಯೋಜನೆ ತನ್ನದೇ ಆದ ವಿಶಿಷ್ಟ ಆಕರ್ಷಣೆಯನ್ನು ನೀಡುತ್ತದೆ.

ಆದರೆ ಇದನ್ನು ಸರಿದೂಗಿಸುವುದು ಡ್ರೈವ್ ಅನುಭವವಾಗಿದೆ. 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಭಾರೀ ಮೋಜು ಮತ್ತು ನಿಮ್ಮ ಪ್ರಯಾಣಕ್ಕಾಗಿ ಸಾಕಷ್ಟು ಪರ್ಫಾರ್ಮೆನ್ಸ್ ಅನ್ನು ನೀಡುತ್ತದೆ. ಮತ್ತು ಇದರಲ್ಲಿನ ಧನಾತ್ಮಕ ಅಂಶವೆಂದರೆ ಸಮತೋಲಿತ ಸವಾರಿ ಮತ್ತು ನಿರ್ವಹಣೆಯ ಸೆಟಪ್ ಆಗಿದೆ, ಇದು ನಿಮ್ಮನ್ನು ಸದಾ ಕಾರಿನ ಕಡೆಗೆ ಆಕರ್ಷಿಸುವಂತೆ ಮಾಡುತ್ತದೆ.

ವಿಶೇಷವಾಗಿ ಕಾರು ಚಾಲನೆ ಮಾಡುವಾಗ ಮೋಜು ಬಯಸುವವರಿಗೆ ಟೈಸರ್ ನಾವು ಶಿಫಾರಸು ಮಾಡುವ ಕಾರು ಆಗಿದೆ. ಹಾಗೆಯೇ ಇದರ ಬೆಲೆ ಕುರಿತು ನಿಮಗೆ ಸಂದೇಹವಾಗಿದ್ದರೆ, ವೇರಿಯಂಟ್-ವಾರು ಬೆಲೆಗಳನ್ನು ಇಲ್ಲಿ ನೋಡಿ:
| ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್ |
| 1.2-ಲೀಟರ್ ಪೆಟ್ರೋಲ |
| ಇ - 7.74 ಲಕ್ಷ ರೂ. |
| ಎಸ್ - 8.6 ಲಕ್ಷ ರೂ. |
| ಎಸ್+ - 9 ಲಕ್ಷ ರೂ. |
| ಎಸ್ ಎಎಮ್ಟಿ- 9.13 ಲಕ್ಷ ರೂ. |
| ಎಸ್+ ಎಎಮ್ಟಿ - 9.53 ಲಕ್ಷ ರೂ. |
| 1-ಲೀಟರ್ ಟರ್ಬೋ-ಪೆಟ್ರೋಲ್ |
| ಜಿ - 10.56 ಲಕ್ಷ ರೂ. |
| ವಿ - 11.48 ಲಕ್ಷ ರೂ. |
| ಜಿ ಆಟೋಮ್ಯಾಟಿಕ್ - 11.96 ಲಕ್ಷ ರೂ. |
| ವಿ ಆಟೋಮ್ಯಾಟಿಕ್ - 12.88 ಲಕ್ಷ ರೂ. |
| 1.2-ಲೀಟರ್ ಸಿಎನ್ಜಿ |
| ಇ - 8.72 ಲಕ್ಷ ರೂ. (+25,000) |

ಟೊಯೋಟಾ ಟೈಸರ್ ಬಣ್ಣಗಳು
ಟೊಯೋಟಾ ಟೈಸರ್ ಭಾರತದಲ್ಲಿ ಈ ಕೆಳಗಿನ ಬಣ್ಣಗಳಲ್ಲಿ ಲಭ್ಯವಿದೆ. CarDekhoದಲ್ಲಿ ವಿವಿಧ ಬಣ್ಣ ಆಯ್ಕೆಗಳೊಂದಿಗೆ ಎಲ್ಲಾ ಕಾರು ಚಿತ್ರಗಳನ್ನು ವೀಕ್ಷಿಸಿ.
ಎನ್ಟೈಸಿಂಗ್ ಸಿಲ್ವರ್
ಮಿಡ್ನೈಟ್ ಬ್ಲ್ಯಾಕ್ ರೂಫ್ನೊಂದಿಗೆ ಕೆಫೆ ವೈಟ್
ಗೇಮಿಂಗ್ ಗ್ರೇ
ಲುಸೆಂಟ್ ಆರೆಂಜ್
ಮಿಡ್ನೈಟ್ ಬ್ಲ್ಯಾಕ್ ರೂಫ್ನೊಂದಿಗೆ ಸ್ಪೋರ್ಟಿನ್ ಕೆಂಪು
ಮಿಡ್ನೈಟ್ ಬ್ಲ್ಯಾಕ್ ರೂಫ್ನೊಂದಿಗೆ ಎಂಟೈಸಿಂಗ್ ಸಿಲ್ವರ್
ಬ್ಲ್ಯೂಯಿಶ್ ಬ್ಲ್ಯಾಕ್
ಸ್ಪೋರ್ಟಿನ್ ರೆಡ್
ಕೆಫೆ ವೈಟ್
comparing ಟೊಯೋಟಾ ಟೈಸರ್ rivals
Rs.7.43 - 12.94 ಲಕ್ಷ* | Rs.6.90 - 12.03 ಲಕ್ಷ* | Rs.6.99 - 10.98 ಲಕ್ಷ* | Rs.7.50 - 13.71 ಲಕ್ಷ* | Rs.11.31 - 20.31 ಲಕ್ಷ* | Rs.5.99 - 9.99 ಲಕ್ಷ* | Rs.7.40 - 14.52 ಲಕ್ಷ* | Rs.5.75 - 10.77 ಲಕ್ಷ* |
| ratingUser Review (103) | User Review (804) | User Review (2) | User Review (39) | User Review (442) | User Review (14) | User Review (881) | User Review (169) |
| ಟ್ರಾನ್ಸ್ಮಿಷನ್ಮ್ಯಾನುಯಲ್ / ಆಟೋಮ್ಯಾಟಿಕ್ | ಮ್ಯಾನುಯಲ್ / ಆಟೋಮ್ಯಾಟಿಕ್ | ಮ್ಯಾನುಯಲ್ / ಆಟೋಮ್ಯಾಟಿಕ್ | ಮ್ಯಾನುಯಲ್ / ಆಟೋಮ್ಯಾಟಿಕ್ | ಮ್ಯಾನುಯಲ್ / ಆಟೋಮ್ಯಾಟಿಕ್ | ಮ್ಯಾನುಯಲ್ / ಆಟೋಮ್ಯಾಟಿಕ್ | ಮ್ಯಾನುಯಲ್ / ಆಟೋಮ್ಯಾಟಿಕ್ | ಮ್ಯಾನುಯಲ್ / ಆಟೋಮ್ಯಾಟಿಕ್ |
| ಇಂಜಿನ್998 ಸಿಸಿ - 1197 ಸಿಸಿ | 998 ಸಿಸಿ - 1197 ಸಿಸಿ | 1197 ಸಿಸಿ | 998 ಸಿಸಿ - 1462 ಸಿಸಿ | 1462 ಸಿಸಿ - 1490 ಸಿಸಿ | 1197 ಸಿಸಿ | 1199 ಸಿಸಿ - 1497 ಸಿಸಿ | 1199 ಸಿಸಿ |
| ಇಂಧನದ ಪ್ರಕಾರಪೆಟ್ರೋಲ್ / ಸಿಎನ್ಜಿ | ಪೆಟ್ರೋಲ್ / ಸಿಎನ್ಜಿ | ಪೆಟ್ರೋಲ್ / ಸಿಎನ್ಜಿ | ಪೆಟ್ರೋಲ್ / ಸಿಎನ್ಜಿ | ಪೆಟ್ರೋಲ್ / ಸಿಎನ್ಜಿ | ಪೆಟ್ರೋಲ್ / ಸಿಎನ್ಜಿ | ಡೀಸಲ್ / ಪೆಟ್ರೋಲ್ / ಸಿಎನ್ಜಿ | ಪೆಟ್ರೋಲ್ / ಸಿಎನ್ಜಿ |
| ಪವರ್76.43 - 98.69 ಬಿಹೆಚ್ ಪಿ | 76.43 - 98.69 ಬಿಹೆಚ್ ಪಿ | 68.79 - 81.8 ಬಿಹೆಚ್ ಪಿ | 86.63 - 109 ಬಿಹೆಚ್ ಪಿ | 86.63 - 101.64 ಬಿಹೆಚ್ ಪಿ | 69 - 82 ಬಿಹೆಚ್ ಪಿ | 99 - 118.27 ಬಿಹೆಚ್ ಪಿ | 72 - 118 ಬಿಹೆಚ್ ಪಿ |
| ಮೈಲೇಜ್20 ಗೆ 22.8 ಕೆಎಂಪಿಎಲ್ | 20.01 ಗೆ 22.89 ಕೆಎಂಪಿಎಲ್ | 23.8 ಗೆ 24.77 ಕೆಎಂಪಿಎಲ್ | 19.96 ಗೆ 21.09 ಕೆಎಂಪಿಎಲ್ | 19.39 ಗೆ 27.97 ಕೆಎಂಪಿಎಲ್ | 23.8 ಗೆ 24.77 ಕೆಎಂಪಿಎಲ್ | 17.01 ಗೆ 24.08 ಕೆಎಂಪಿಎಲ್ | - |
| ಬೂಟ್ನ ಸಾಮರ್ಥ್ಯ308 ಲೀಟರ್ಗಳು | 308 ಲೀಟರ್ಗಳು | - | - | 373 ಲೀಟರ್ಗಳು | 318 ಲೀಟರ್ಗಳು | 382 ಲೀಟರ್ಗಳು | 366 ಲೀಟರ್ಗಳು |
| ಗಾಳಿಚೀಲಗಳು6 | 6 | 6 | 6 | 6 | 6 | 6 | 6 |
| currently viewing | ಟೈಸರ್ ವಿಎಸ್ ಫ್ರಾಂಕ್ಸ್ | ಟೈಸರ್ ವಿಎಸ್ ಗ್ಲ್ಯಾನ್ಜಾ | ಟೈಸರ್ ವಿಎಸ್ ಬ್ರೆಝಾ | ಟೈಸರ್ ವಿಎಸ್ ಅರ್ಬನ್ ಕ್ರೂಸರ್ ಹೈ ರೈಡರ್ | ಟೈಸರ್ ವಿಎಸ್ ಬಾಲೆನೋ | ಟೈಸರ್ ವಿಎಸ್ ನೆಕ್ಸಾನ್ | ಟೈಸರ್ ವಿಎಸ್ ಪಂಚ್ |
ಟೊಯೋಟಾ ಟೈಸರ್ ವೀಡಿಯೊಗಳು
16:19Toyota Taisor Review: Better Than Maruti Fronx?2 years ago158.8K ವ್ಯೂವ್ಸ್
2:26Toyota Taisor Launched: Design, Interiors, Features & Powertrain Detailed #In2Mins2 years ago118.7K ವ್ಯೂವ್ಸ್
10:03Toyota Taisor 3500+ Km Long Term Review: Subtly Smart!1 year ago50.7K ವ್ಯೂವ್ಸ್
ಟೊಯೋಟಾ ಟೈಸರ್ 2026: ಲೇಟೆಸ್ಟ್ ಸುದ್ದಿ articles
- ಇತ್ತೀಚಿನ ಸುದ್ದಿ
- ರೋಡ್ ಟೆಸ್ಟ್
ಟೊಯೋಟಾ ಟೈಸರ್ ಬಳಕೆದಾರರ ವಿಮರ್ಶೆಗಳು
- ಎಲ್ಲಾ (103)
- ಲುಕ್ಸ್ (45)
- ಕಂಫರ್ಟ್ (38)
- ಮೈಲೇಜ್ (37)
- ಇಂಜಿನ್ (24)
- ಇಂಟೀರಿಯರ್ (15)
- space (15)
- ಬೆಲೆ/ದಾರ (26)
- ಹೆಚ್ಚು ...
- ಇತ್ತೀಚಿನ
- ಸಹಾಯಕವಾಗಿದೆಯೆ
- critical
- Toyota Made The Best CarsComfortable car and budget friendly car. It's boot space is good it make me feel like I drive a luxury car, it has better than maruti suzuki fronx. It build quality is very very good than fronx, It looks amazing when I ride it on road and it's piece are speechless like how it can be soo cheaper at these features I loved it.ಮತ್ತಷ್ಟು ಓದು
- Quality And LooksIt's an amazing and budget friendly car. Specially when 4-5 members in a family. Build quality is also good. If you confused between fronx and taisor then I should suggest you to purchase taisor because fronx is also definitely good car, but toyota gives you a kind of premium feel. Services is also nice.ಮತ್ತಷ್ಟು ಓದು1
- My Self Experience And Trust Me.thanks Toyota.Excell thanks valuable great in performance best 20 km on road average no vibration silent engine top safety as minimum as service charges more servicing stations in india, some times gives more average abouts 23 km. Good quality of suspension as compared to glanza I'm satisfied with the price and quality.ಮತ್ತಷ್ಟು ಓದು
- Fully Featured And Comfortable Car In BudgetFully featured and comfortable car, looks and fine touch colour if you choose base model it is also feel rich and as it is in a suv segment you will feel the height and the brand logo feels like you are buying expensive car the tyres and safety features are incredible and it is budget friendly so no need to take stress for that rich colours and cng option also available.ಮತ್ತಷ್ಟು ಓದು1
- Review Of Toyota Taisor S PlusToyota taisor s plus best in class. Bought it month ago. The cruise control is very nice. Power and mileage is very good. Space is also very nice and comfortable. Bought white color and got 50,000/ off in belagavi showroom staff is also very nice and friendly. I think service cost should be lower compared to other. Go for it guys.ಮತ್ತಷ್ಟು ಓದು
- ನೋಡಿ ಇನ್ನಷ್ಟು
ಟೊಯೋಟಾ ಟೈಸರ್ ಮೈಲೇಜ್
ಪೆಟ್ರೋಲ್ ಮೊಡೆಲ್ಗಳು 20 ಕೆಎಂಪಿಎಲ್ ಗೆ 22.8 ಕೆಎಂಪಿಎಲ್ with manual/automatic ನಡುವೆ ಮೈಲೇಜ್ ರೇಂಜ್ ಅನ್ನು ಹೊಂದಿವೆ. ಸಿಎನ್ಜಿ ಮೊಡೆಲ್ 28.5 ಕಿಮೀ / ಕೆಜಿ ಮೈಲೇಜ್ ಹೊಂದಿದೆ.
| ಇಂಧನದ ಪ್ರಕಾರ | ಟ್ರಾನ್ಸ್ಮಿಷನ್ | ಎಆರ್ಎಐ ಮೈಲೇಜ್ |
|---|---|---|
| ಪೆಟ್ರೋಲ್ | ಆಟೋಮ್ಯಾಟಿಕ್ | 22.8 ಕೆಎಂಪಿಎಲ್ |
| ಪೆಟ್ರೋಲ್ | ಮ್ಯಾನುಯಲ್ | 21.7 ಕೆಎಂಪಿಎಲ್ |
| ಸಿಎನ್ಜಿ | ಮ್ಯಾನುಯಲ್ | 28.5 ಕಿಮೀ / ಕೆಜಿ |
Ask anything & get answer ರಲ್ಲಿ {0}
ಪ್ರಶ್ನೆಗಳು & ಉತ್ತರಗಳು
A ) The CSD price information is provided by the dealer. Therefore, we suggest conne...ಮತ್ತಷ್ಟು ಓದು
A ) Yes, the Toyota Taisor is available with a 1.2-liter, four-cylinder engine.
A ) Toyota Taisor price starts at ₹ 7.74 Lakh and top model price goes upto ₹ 13.04 ...ಮತ್ತಷ್ಟು ಓದು
A ) No, the Toyota Taisor does not have a sunroof.

ಟೊಯೋಟಾ ಟೈಸರ್ ಆನ್-ರೋಡ್ ಬೆಲೆ in ಪಾಪ್ಯುಲರ್ cities
ಟ್ರೆಂಡಿಂಗ್ ಟೊಯೋಟಾ ಕಾರುಗಳು
ಟೊಯೋಟಾ ಅರ್ಬನ್ ಕ್ರೂಸರ್ ಹೈ ರೈಡರ್Rs.11.31 - 20.31 ಲಕ್ಷ*
ಟೊಯೋಟಾ ಗ್ಲ್ಯಾನ್ಜಾRs.6.99 - 10.98 ಲಕ್ಷ*
ಟೊಯೋಟಾ ರೂಮಿಯನ್Rs.9.79 - 14.21 ಲಕ್ಷ*
ಟೊಯೋಟಾ ಫ್ರಾಜುನರ್Rs.35.11 - 50.97 ಲಕ್ಷ*
ಟೊಯೋಟಾ ಇನೋವಾ ಕ್ರಿಸ್ಟಾRs.19.95 - 27.10 ಲಕ್ಷ*
Popular ಎಸ್ಯುವಿ cars
- ಟ್ರೆಂಡಿಂಗ್
- ಲೇಟೆಸ್ಟ್
- ಉಪಕಮಿಂಗ್
ಟಾಟಾ ಸಿಯೆರಾRs.11.49 - 21.59 ಲಕ್ಷ*
ಮಹೀಂದ್ರ ಎಕ್ಸ್ಯುವಿ 3xoRs.7.79 - 15.04 ಲಕ್ಷ*
ಮಹೀಂದ್ರ ಥಾರ್ ogRs.10.32 - 18.99 ಲಕ್ಷ*
ಟಾಟಾ ಪಂಚ್Rs.5.75 - 10.77 ಲಕ್ಷ*
ಮಾರುತಿ ಸುಜುಕಿ ಬ್ರೆಝಾRs.7.50 - 13.71 ಲಕ್ಷ*
- ಹೊಸ ವೇರಿಯೆಂಟ್
ರೆನಾಲ್ಟ್ ಡಸ್ಟರ್Rs.10.49 - 19.49 ಲಕ್ಷ* - ಹೊಸ ವೇರಿಯೆಂಟ್
ಎಂಜಿ ಹೆಕ್ಟರ್Rs.12.14 - 20 ಲಕ್ಷ*
ಹೊಂಡಾ ಇಲೆವಟ್Rs.11.80 - 18.40 ಲಕ್ಷ*- ಹೊಸ ವೇರಿಯೆಂಟ್
ಟಾಟಾ ಹ್ಯಾರಿಯರ್Rs.13 - 26.11 ಲಕ್ಷ* - ಹೊಸ ವೇರಿಯೆಂಟ್
ಹುಂಡೈ ಅಲ್ಕಝರ್Rs.14.51 - 21.96 ಲಕ್ಷ*
ಜನಪ್ರಿಯ ಎಲೆಕ್ಟ್ರಿಕ್ ಕಾರುಗಳು
ಟೆಸ್ಲಾ ರೋಡ್ಸ್ಟರ್Rs.50.06 ಲಕ್ಷ - 2.50 ಸಿಆರ್*
ಮಾರುತಿ ಸುಜುಕಿ ಇ ವಿಟಾರಾRs.16.19 - 20.21 ಲಕ್ಷ*
ಟಾಟಾ ಪಂಚ್ ಇವಿRs.9.79 - 12.99 ಲಕ್ಷ*
ಮಹೀಂದ್ರಾ ಎಕ್ಸ್ಇವಿ 9ಇRs.21.90 - 31.25 ಲಕ್ಷ*
ಎಂಜಿ ವಿಂಡ್ಸರ್ ಇವಿRs.14.85 - 19.15 ಲಕ್ಷ*

